ಲೈಂಗಿಕ ಶೋಷಣೆ ಎಂಬುದು ವಿಭಿನ್ನ ರೀತಿಯ ಸ್ತರವಿನ್ಯಾಸ ಹೊಂದಿದ್ದು ಅದರಲ್ಲಿ ದೇವದಾಸಿ ಪದ್ದತಿಯು ಒಂದಾಗಿದೆ,ಆರಂಭದಲ್ಲಿ ದೇವದಾಸಿ ಪದ್ದತಿ ತುಂಬಾ ಗೌರವ ಹಾಗೂ ಧಾರ್ಮಿಕ ಭಕ್ತಿಯಿಂದ ಕೂಡಿದ್ದು ಕಾಲಾನಂತರದಲ್ಲಿ ವೇಶ್ಯೆವಾಟಿಕೆಯೆಂಬ ಆಯಾಮದೊಂದಿಗೆ ಮೇಲ್ಜಾತಿ ಪಾಳೆಗಾರಿಕೆ ಪುರುಷರ ಕಾಮದಸಿವಿನ ಕೂಸಾಗಿ ಪರಿವರ್ತನೆಗೊಂಡಿದೆ.
ಇಂದು ದೇವದಾಸಿ ಪದ್ದತಿಗೆ ಬಾಲಕಿಯರನ್ನು ದೂಡಲು ದಲಿತರಲ್ಲಿ ಅನೇಕ ಕಾರಣಗಳಿವೆ ಅವುಗಳಲ್ಲಿ ಅನಕ್ಷರತೆ.ಬಡತನ. ಸಂಪ್ರದಾಯ. ಮೌಡ್ಯತೆ.ಕಂದಾಚಾರಗಳು ದಲಿತರನ್ನು ಇಂದಿಗೂ ಕಾಡುತ್ತಿವೆ. ಇದಕ್ಕೆ ಶಿಕ್ಷಣ ಕಲಿಯದೆ ಇರುವುದು ಪ್ರಮುಖ ಕಾರಣವಾಗಿದೆ.
ಮಕ್ಕಳಿಲ್ಲದವರು ದೇವರಿಗೆ ಹರಸಿಕೊಂಡಾಗ ಹುಟ್ಟಿದ ಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುತ್ತಾರೆ.ಬಹಳ ಜನ ಹೆಣ್ಣುಮಕ್ಕಳೆ ಜನಿಸಿದರೆ ಗಂಡುಮಗು ಹುಟ್ಟಲಿ ಎಂದು ಒಂದು ಹೆಣ್ಣು ಮಗುವನ್ನು ಬಸವಿಯನ್ನಾಗಿ ಬಿಡುವುದು.
ಹುಟ್ಟಿದ ಹೆಣ್ಣುಮಗುವಿನ ನೆತ್ತಿಯ ಮೇಲೆ ಕೂದಲು ಗಂಟಾದರೆ ಆ ಮಗು ದೇವರಿಗೆ ಬಿಡಬೇಕು ಎಂಬ ಮೂಢನಂಬಿಕೆ.
ಪೂಜಾರಿ ಮೇಲೆ ದೇವರು ಬಂದು ಒಂದು ಮಗುವನ್ನು ನನ್ನ ಸೇವೆಗೆ ಬಿಡು ನಿನ್ನ ಮನೆಯ ಕಷ್ಟ ಪರಿಹರಿಸುವೆ ಎಂದು ಹೇಳುವ ಮೋಸತನದಿಂದಲು ದೇವದಾಸಿಯರಾಗುತ್ತಾರೆ.ಮಂಗಳವಾರ ಶುಕ್ರವಾರ ಯಲ್ಲಮನ ಪಡಲಿಗೆಯನ್ನು ತಲೆ ಮೇಲೆ ಹೊತ್ತು ಭಿಕ್ಷೆಗೆ ಬಂದ ಜೋಗುತಿ ಹೇಳಿದರೆ ತಕ್ಷಣವೆ ಆ ಮನೆಯ ಹೆಣ್ಣು ಮಗುವನ್ನು ದೇವದಾಸಿಯರನ್ನಾಗಿ ಬಿಡುತ್ತಾರೆ.
ಈ ಪದ್ದತಿಯಲ್ಲಿ
ದೇವದಾಸಿ, ಬಸವಿ,ಜೋಗುತಿ,ದಾಸಿ,ದೇವರ ಸೂಳೆ,ದೇವರ ಮಗಳು,ದೇವರಿಗೆ ಬಿಡುವುದು,ದೇವರ ಹೆಂಡತಿ,ಮಣಿಕಟ್ಟು,ಹನುಮಪ್ಪನ ಸೂಳೆ. ಮುತ್ತುಕಟ್ಟು,ಮುದ್ರೆಹೊರಿಸುವುದು,ಗೊರವತಿ,ಮಾತಂಗಿ ಸೂಳೆ,ಸೀರೆಉಡಿಕೆ,ಹೀಗೆ ನಾನ ಹೆಸರಿನಲ್ಲಿ ಕರೆಯುತ್ತಾರೆ,ಕರ್ನಾಟಕ, ತಮಿಳುನಾಡು,ಆಂದ್ರಪ್ರದೇಶ,ತೆಲಾಂಗಣ,ಗೋವಾ,ಕೇರಳ,ಮಹಾರಾಷ್ಟ್ರ, ಉತ್ತರಭಾರತದ ಕೆಲವು ರಾಜ್ಯಗಳಲ್ಲಿ ಈ ಪದ್ದತಿ ನೆಲಸಿದೆ,
ಈ ದೇವದಾಸಿಯರು ಎರಡು ರೀತಿಯಲ್ಲಿ ದೇವರ ಸೇವೆಯನ್ನು ಮಾಡುತಿದ್ದರು
1)ಅಂಗಭೋಗ
2)ರಂಗಭೋಗ
ಅಂಗಭೋಗವೆಂದರೆ ದೇವರಿಗೆ ಅಭಿಷೇಕ ಮಾಡುವುದು,ಫಲಪುಷ್ಪಗಳನ್ನು ನೈವೇದ್ಯ ಮಾಡುವುದು, ದೇವರಿಗೆ ಶೃಂಗರಿಸುವುದು,ಇನ್ನು ರಂಗ ಭೋಗವೆಂದರೆ ದೇವರಿಗೆ ಪ್ರಿಯವೆಂದು ನಂಬಿದ್ದ ಸಂಗೀತ,ನಾಟ್ಯ,ಗಳಿಂದ ಭಕ್ತರನ್ನು ರಂಜಿಸುವುದು,
ಪ್ರಾಚೀನ ಹಿಂದುಗ್ರಂಥಗಳಲ್ಲಿ ಏಳುವಿಧದ ದೇವದಾಸಿಯರು ಸಿಗುತ್ತಾರೆ
Also Read | “The one who is in pain knows the pain”: Huchangi Prasad
1)ದತ್ತಾ::ತನ್ನನ್ನು ತಾನೆ ಯಾವುದಾದರೂ ದೇವಾಲಯಕ್ಕೆ ಅರ್ಪಿಸಿಕೊಂಡವಳು,2)ವಿಕ್ರೀತಾ::ದೇವಾಲಯದ ಸೇವಾಕಾರ್ಯಗಳಿಗೆ ತನ್ನನ್ನೆ ಮಾರಿಕೊಂಡವಳು,3)ಭೃತ್ಯಾ::ತನ್ನ ಕುಟುಂಬದರ ಪೋಷಣೆಯ ಸಲುವಾಗಿ ದೇವದಾಸಿಯಾದವಳು,4)ಭಕ್ತಾ::ಕೇವಲ ಭಕ್ತಿಭಾವಗಳಿಂದ ಪ್ರೇರಿತಳಾಗಿ ದೇವಾಲಯವನ್ನು ಪ್ರವೇಶಿಸಿದಳು5)ಹೃತಾ::ಅಪಹರಿಸಿಕೊಂಡು ತಂದ ಹೆಣ್ಣು,ದೇವಾಲಯಕ್ಕೆ ಉಡುಗೊರೆಯಾಗಿ ಬಂದವಳು,6)ಅಲಂಕಾರಾ::ರಾಜ ಅಥವಾ ಮಂತ್ರಿ ಯಾವ ಯುವತಿಯನ್ನು ಅಪೇಕ್ಷಿತ ಪರಂಪರೆಯಲ್ಲಿ ಸಂಪೂರ್ಣ ದೀಕ್ಷೆತೆಯೆಂದು ಭಾವಿಸುತಿದ್ದರೊ ಅಂಥ ಯಿವತಿಯನ್ನು ಅಲಂಕರಿಸಿ ದೇವಾಲಯಕ್ಕೆ ಒಪ್ಪಿಸಲಾಗುತಿತ್ತು.7)ರುದ್ರಗಣಿಕಾ ಅಥವಾ ಗೋಪಿಕ ನಿಯಮದ ವೃತ್ತಿ ಇಂತಿಷ್ಟು ಹಣ ಪಡೆದು ನಾಟ್ಯ.ಸಂಗೀತದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದು.ಇವರು ದೇವರನ್ನ ಜೀವಂತ ವ್ಯಕ್ತಿಯೆಂದು ಗಂಡನೆಂದು ಹಾಗೂ ತಂದೆಯೆಂದು ಭಾವಿಸಿ ತಮ್ಮ ವೈಭವಪೂರ ಜೀವನವನ್ನು ದೇವರಿಗೆ ನಾನರೀತಿಯಲ್ಲಿ ಸೇವೆಸಲ್ಲಿಸುತ್ತಾರೆ.
ಏನು ಅರಿಯದ ಮುಗ್ದ ವಯಸ್ಸಿನಲ್ಲಿ ದೇವರ ಹೆಸರಿನಲ್ಲಿ ಪೂಜಾರಿ ಕೆಂಪು ಮತ್ತು ಬಿಳಿ ಮುತ್ತುಗಳುಳ್ಳ ಸರ ಮತ್ತು ತಾಳಿ ಕಟ್ಟುತ್ತಾನೆ ಆಗ ಆಕೆ ದೇವರ ಹೆಂಡತಿ.ದೇವರ ಹೆಂಡತಿ ಮೇಲೆ ಎಲ್ಲರಿಗೂ ಸಮಾನ ಹಕ್ಕಿದೆ.ದೇವರ ಪೂಜೆಗೆ ಎಲ್ಲರು ಹೋಗುತ್ತಾರೊ ಅದೆ ರೀತಿಯಲ್ಲಿ ದೇವದಾಸಿಯ ಮನೆಗೆ ಎಲ್ಲರು ಹೋಗಬಹುದು ಎಂಬುದು ಹಲವರ ನಂಬಿಕೆ.ದಲಿತ ಬಾಲಕಿಯೊಬ್ಬಳು ದೇವದಾಸಿಯಾದ ಮೊದಲನೆ ರಾತ್ರಿಯನ್ನು ಊರಿನ ಮುಖ್ಯಸ್ಥ ಗೌಡ ಆಕೆಯೊಂದಿ ಕಾಲಕಳಿಬೇಕು ಅವನು ಸಾಕಾಗುವ ದಿನಗಳತನಕ ಆ ದೇವದಾಸಿಯ ಜೊತೆಗೆ ಇರಬಹುದು ಅವನು ಸಾಕು ಎಂದ ಮೇಲೆ ಪೂಜಾರಿ ಅವಳನ್ನು ಭೋಗಿಸುತ್ತಾನೆ.ಪೂಜಾರಿಯ ಸರತಿ ಮುಗಿದ ಮೇಲೆ ಊರಿನ ಪ್ರಮುಖರು ಮತ್ತು ಸಾಮಾನ್ಯರು ಅವಳನ್ನು ಅನುಭೋಗಿಸುತ್ತಾರೆ .
ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿ ದೇವದಾಸಿಯರಾಗುವ ವಿಧಾನಗಳಿರುತ್ತವೆ ಅವುಗಳಲ್ಲಿ ಕರ್ನಾಟಕದ ಸವದತ್ತಿ ಯಲ್ಲಮ್ಮಳ ಹೆಸರಿನಲ್ಲಿ ದೇವದಾಸಿಯಾಗಿ ತನ್ನ ಬದುಕನ್ನು ಸೂಳೆಗಾರಿಕೆಯಲ್ಲಿ ಕಳೆದು ಇದೀಗ ಮಾಜಿದೇವದಾಸಿಯಾಗಿ ಜೀವಿಸುತ್ತಿರುವ.
Also Read | Breaking Bharatanatyam’s many shackles: Nrithya Pillai
ಮಧ್ಯಕರ್ನಾಟಕದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ರೇಣುಕಮ್ಮಳನ್ನು ತಾನು ಹೇಗೆ ದೇವದಾಸಿಯಾದಳೆಂದು ಅವರ ಬಾಯಲ್ಲೆ ಹೇಳುವುದಾದರೆ “ನಾನು ಆಗಿನ್ನು ಹತ್ತುವರ್ಷದವಳು ನೆನಪು ಚನ್ನಾಗಿಯೆ ಇದೆ.ನನ್ನ ಅಪ್ಪ ಅವ್ವ ನೆಂಟರು ಬೀಗರು ಎಲ್ಲಾ ಸೇರಿ ಭರತ ಹುಣ್ಣಿಮೆಯಲ್ಲಿ ಯಲ್ಲಮ್ಮನ ಗುಡ್ಡಕ್ಕೆ ತೆರಳಿದ್ದೇವು.ಜೋಗುಳಬಾವಿಯಲ್ಲಿ ಝಳಕ ಮಾಡಿಸಿದರು ಕೆರೆಯಾಗಳಹಳ್ಳಿ ರಾಮಜ್ಜಿ(ಮಾಜಿ ದೇವದಾಸಿ) ಒದ್ದೆ ಬಟ್ಟೆಯನ್ನೆಲ್ಲಾ ಬಿಚ್ಚಿಸಿದಳು ತಲೆಯಿಂದ ಪಾದಾದವರೆಗೆ ಅರಿಶಿಣ ಹಚ್ಚಿದಳು ನಂತರ ಬೆತ್ತಲೆಯ ನನ್ನ ದೇಹದ ತುಂಬಾ ಬೇವಿನಸೊಪ್ಪು ಕಟ್ಟಿದರು(ಇದಕ್ಕೆ ಬೇವಿನ ಸೀರೆ ಹರಕೆ ಎನ್ನುತ್ತಾರೆ) ತಲೆಯ ಮೇಲೆ ಗುರು ಕಳಸ ಹೊರಿಸಿ(ಒಂದು ನೀರು ತುಂಬಿದ ಮಣ್ಣಿನ ಕುಂಬದ ಕಂಠದ ಸುತ್ತ ವೀಳ್ಯದೆಲೆ ಇಟ್ಟು ಅದರ ಮಧ್ಯ ಸಿಪ್ಪೆ ಸುಲಿದ ತೆಂಗಿನ ಕಾಯಿಟ್ಟು ಅದಕ್ಕೆ ಹೂವು ಅರಿಶಿಣ ಭಂಡಾರ ಕುಂಕುಮ ಹಚ್ಚಿವುದು) ಜೋಗುಳಬಾವಿ ಸತ್ಯವ್ವನ ದೇವಸ್ಥಾನ ಸುತ್ತ ಮೂರು ಸುತ್ತು ಸುತ್ತಿ ಪ್ರದಕ್ಷಿಣೆ ಮಾಡಿ ಮತ್ತೆ ಅದೆ ಬಾವಿಯಲ್ಲಿ ಇಳಿದು ಮೂರು ಬಾರಿ ಮುಳುಗಿ ಝಳಕ ಮಾಡಿ ಹೊಸ ಬಟ್ಟೆಗಳನ್ನು ತೊಡಿಸಿದರು.ನನ್ನ ಒಂದು ಕರಿಕಂಬಳಿ ಗದ್ದುಗೆ ಹಾಸಿ ನನ್ನ ಕೂರಿಸಿದರು.
ನನ್ನ ಮುಂದೆ ಐದು ಗುರುಕಳಸ ಇಟ್ಟು ಅದರ ಸುತ್ತ ಮೂರು ಸಲ ದಾರ ಸುತ್ತಿ ಐದು ಪಡಲಿಗೆ ಮೂರು ಕೊಡ(ಸ್ಟೀಲ್ ಕೊಡಕ್ಕೆ ನವಿಲು ಗರಿಯಿಟ್ಟು ಅದರ ಮಧ್ಯ ದೇವಿಯ ಬೆಳ್ಳಿ ಮುಖ ಇಟ್ಟು ಅಲಂಕರಿಸಿರುತ್ತಾರೆ)ಗಳನ್ನಿಟ್ಟು ಒಂದು ಚೌಡಿಕೆ ಒಟ್ಟು ಒಂಬತ್ತು ದೇವರುಗಳನ್ನು ಸಾಲಾಗಿ ಕೂರಿಸಿದರು.ಅವುಗಳಿಗೆ ಹೂಳಿಗೆ.ಅನ್ನ .ಹಾಲುತುಪ್ಪ.ಎಣಗಾಯಿ ಪಲ್ಯ(ಬದನೆಕಾಯಿ) ಹೀಗೆ ನಾನ ನಮೂನಿ ಅಡುಗೆಗಳನ್ನು ಬಾಳೆ ಎಲೆಯ ಮೇಲೆ ಎಡೆಹಾಕಿ.ಕಾಯಿಕರ್ಪೂರಗಳಿಂದ ದೇವರಿಗೆ ಎಲ್ಲರು ಪೂಜಿಸಿ ಜೋಗು ಹಾಕಿ(ಯಲ್ಲಮ್ಮ ನಿನ್ ಪಾದಕ್ಕೆ ಉಧೋ ಎಂಬ ಭಕ್ತಿ ಸ್ತುತಿ) ದೇವಿಯನ್ನು ಪೂಜಿಸಿದರು.ಆಗ ನೆರೆದಿದ್ದ ಎಲ್ಲರ ಕೈಯಲ್ಲಿ ಅರಿಶಿಣ ಮಿಶ್ರಿತ ಅಕ್ಕಿಕಾಳುಗಳನ್ನು ಕೊಟ್ಟರು ಆಗ ದೇವಿಯ ಪೂಜಾರಿ ನನ್ನ ಕೈತುಂಬಾ ಹಸಿರುಬಳೆ ತೊಡಸಿದ.ಹಣೆಗೆ ವಿಭೂತಿ ಅರಿಶಿಭಂಡಾರ ಕುಂಕುಮ ಹಚ್ಚಿದ ಕೆನ್ನೆಗೆ ಅವ್ವ ಅರಿಶಿಣ ಹಚ್ಚಿದಳು ಚಿಕ್ಕಮ್ಮ ತಲೆತುಂಬ ಮಲ್ಲಿಗೆ ಹೂವ ಮುಡಿಸಿದರು.ಆಗ ಪೂಜಾರಿ ಮೊದಲು ಮುತ್ತು ಕಟ್ಟಿದ(ಕೆಂಪು ಬಿಳಿ ಮುತ್ತುಗಳನ್ನು ದಾರದಿಂದ ಪೋಣಿಸಿದ ಸರ) ನಂತರ ಕರಿಮಣಿಯ ತಾಳಿಕಟ್ಟಿದ.ಅಲ್ಲದೆ ಆ ಪೂಜಾರಿ ನನ್ನ ಕಿವಿಯ ಹತ್ತಿರ ಎರಡು ಕೈಗಳನ್ನು ಅಡ್ಡ ಹಿಡಿದು ಯಾರಿಗೂ ಕೇಳದಂತೆ ಬಂದು ಮೆಲ್ಲಗೆ “” ಇವತ್ತಿನಿಂದ ಇನ್ನುಮುಂದೆ ನೀನು ದೇವರ ಮಗಳು ಅಂದರೆ ದೇವರಿಗೆ ಮೀಸಲಾದ ಹೆಣ್ಣು.ನಿನ್ನ ಮೇಲೆ ಸರ್ವ ಪುರುಷರು ಸವಾರಿ ಮಾಡಬಹುದು.ಯಾರೊಂದಿಗಾದರು ನೀನು ಬದುಕಬಹುದು ಊರ ಮುಖ್ಯಸ್ಥರು ಮಧ್ಯರಾತ್ರಿ ಕರೆದರು ಅವರ ಸೇವೆಗೆ ನೀನು ಬದ್ದಳಾಗಿ ಬದುಕಬೇಕು ನೀನು ಜೀವಂತ ಇರುವವರೆಗೂ ನಿತ್ಯಮುತ್ತೈದೆ.ಪ್ರತಿ ಹುಣಿಮೆಗೂ ನೀನು ಯಲ್ಲಮ್ಮಳ ಗುಡ್ಡಕ್ಕೆ ಬರಬೇಕು.ನೀನು ಯಾವುದೆ ಕಾರಣಕ್ಕು ದುಡಿಯುವಂತಿಲ್ಲ ದೇವಿಯ ಜಗ(ಪಡಲಿಗೆ) ಹೊತ್ತು ಮನೆಮನೆಗೆ ತೆರಳಿ ಭಿಕ್ಷೆ ಬೇಡಬೇಕು ಇಲ್ಲವಾದರೆ ಪ್ರಮುಖರೊಂದಿಗೆ ಕಾಮದ ಸೇವೆ ಮಾಡಬೇಕು””ಎಂದು ಹೇಳಿದ ಪೂಜಾರಿ ಮಾತನ್ನ ಸಾಕ್ಷಾತ್ ಆ ಯಲ್ಲಮ್ಮದೇವಿ ಹೇಳಿದಳೇನೊ ಎಂಬಂತೆ ನಾನು ಭಕ್ತಿಭಾವಗಳಿಂದ ತಲೆಯನ್ನು ಅಲ್ಲಾಡಿಸಿ ಹೂಂ ಎಂದು ಒಪ್ಪಿಗೆ ಕೊಟ್ಟು ಪೂಜಾರಿಗೆ ಕೈ ಮೇಲೆ ಯಲ್ಲಮ್ಮ ತಾಯಿ ಮೇಲೆ ಪ್ರಮಾಣ ಮಾಡಿದೆ.
ಹೀಗೆ ಇಂದಿಗೂ ಇದೆ ತರ ಕರ್ನಾಟಕದಲ್ಲಿ ದೇವರ ಹೆಸರಿನಲ್ಲಿ ದೇವದಾಸಿಯರನ್ನಾಗಿ ಮಾಡುತ್ತಾರೆ.
ಇಂದಿಗೂ ದೇವದಾಸಿಯರು ಬಹಳಷ್ಟು ನೋವು ನರಕಯಾತನೆಗಳನ್ನು ಅನುಭಿಸುತಿದ್ದಾರೆ.ಖಾಯಂ ಗಂಡನಿಲ್ಲದೆ ತನ್ನ ಮಕ್ಕಳಿಗೆ ಖಾಯಂ ಅಪ್ಪನಿಲ್ಲದೆ ಪರಿತಪಿಸುತಿದ್ದಾರೆ.ಇತ್ತ ಕೂಲಿನಾದ್ರು ಮಾಡಿಕೊಂಡು ಸ್ವಾಭಿಮಾನದಿಂದ ಬದುಕಬೇಕೆಂದರೆ ಈ ಸಮಾಜ ಹತ್ತಿರ ಸೇರಿಸದೆ ತುಂಬಾ ದೂರ ಇರಿಸುತ್ತೆ.ಅನಿವಾರ್ಯವಾಗಿ ಅವರು ಭಿಕ್ಷೆ ಮತ್ತು ಸೆಕ್ಸ್ ವರ್ಕಿಗೆ ಇಳಿಯಬೇಕಾಗುತ್ತದೆ.
ವೃತ್ತಿ ಗೌರವವಿಲ್ಲದ ಜಗತ್ತಿನ ಏಕ ಮಾತ್ರ ದಂಧೆ ಅಂದರೆ ದೇವದಾಸಿಯರು ಮಾಡುವ ವೇಶ್ಯೆ ವೃತ್ತಿ.
ಹೀಗೆ ತಮ್ಮ ನವ ಕನಸ್ಸುಗಳನೊತ್ತು ಬೆಳೆಯುವ ಬಾಲಕಿಯರನ್ನು ಬಲವಂತವಾಗಿ ದೇವದಾಸಿಯೆಂಬ ಅನಿಷ್ಟ ಪದ್ದತಿಗೆ ಒಳಪಡಿಸಿ ಅವರನ್ನು ವೇಶ್ಯೆಉರನ್ನಾಗಿ ಮಾಡಿ ಜೀವಂತ ಶವ ಮಾಡುವ ಸಾಮಾಜಿಕ ವ್ಯವಸ್ಥೆಗೆ ದಿಕ್ಕಾರ ಹೇಳಲೆಬೇಕು.ಐತಿಹಾಸಿಕವಾಗಿ ದೇವರ ಹೆಸರಿನಲ್ಲಿ ಮಹಿಳೆಯರನ್ನು ಗುಲಾಮಳಾಗಿ ಸೃಷ್ಟಿಸುವ ಪುರೋಹಿತಶಾಹಿಗಳ ವರ್ತನೆ ನಿಜಕ್ಕೂ ಖಂಡನೀಯ.
Translation
The devadasi system has assumed a unique form of sexual exploitation in states like Karnataka, Tamil Nadu, Andhra Pradesh, Telangana, Goa, Kerala, Maharashtra and even in some northern Indian states. A system that once upon a time in history consisted of artists who commanded a great deal of respect and devotion is today a nexus that exists primarily for the sexual exploitation of women belonging in this group. It exists as a way to cater to the lust of powerful men.
Dalit girls are “dedicated” to deities as their “wives” when they are very young. A priest, in order to mark this process, ties a necklace with red and white beads in it around her neck. This “divine wife” is then a “public property” — open to everyone just like a temple is. This practice, therefore, dictates that if a dalit girl is dedicated as a devadasi to a temple, she has to spend the night of her dedication with the Village Chief. Later on, in a hierarchical order, she is sexually exploited by the other priests, after that the village elders and then, other men.
“Devadasi”, “Basavi”, “Jogati”, “Daasi”, “Devara Soole”, “Devara Magalu”, “Devarige Biduvudu”, “Devara Hendati”, “Manikattu”, “Hanumappana Soole”, “Muttu Kattu”, “Mudre Horisuvudu”, “Goravati”, “Matangi Soole”, “Seere Udike”, are few names reserved for the women in this system.
Also Read | The past still infects the present: Srividya Natarajan
Every region has its own sets of rituals of dedication too. But the devadasis have historically performed two kinds of services, broadly known as the “Angabhoga” — ritual bath of the deity, ritual offering of flowers, fruits and food to the deity, adorning the idol with jewellery and flowers — and “Rangabhoga” — performing music, dance and plays believed to be the favourites of the deity and to entertain the devotees.
Renukamma, a former devadasi of Karnataka’s Savadatti Yellamma Temple has explained the way she was dedicated to a temple. A native of the Santhebennur village of the Davangere district situated in central Karnataka, she spent almost half of her life as a sex worker. Renukamma says:
I remember it very well. I was just ten years old. My parents, relatives and I were visiting the Savadatti Yellamma hill on a “bharata hunnime” (an auspicious full moon day). They made me take a ritual bath in the “jogula baavi” (jogula well). Ramajji from Kereyagalahalli (a former devadasi) disrobed me and applied turmeric all over my body. My body was covered with neem leaves (called a neem leaves saree offering) and they placed a guru kalasa over my head (an earthen pot filled with water and decorated with betel leaves around it. A coconut smeared with turmeric and vermilion is also placed on the pot). I was made to go around the temple of Satyavva thrice and was made to take three dips in the “jogula baavi” and change into new clothes.
Following this, they made me sit on a black woollen quilt. In front of me were five guru kalasas, a steel pot with a peacock feather and the mask of the goddess, and nine deities placed in a row. Sweet bread, rice, milk, ghee, “yennegayi palya” (a north Karnataka preparation of eggplant) etc, were placed on plantain leaves and offered to the deities in front of me.
The goddess was then worshipped and the people assembled there chanted, “yellam nin paadakke udho”, to the goddess of Savadatti. Those present there were then given uncooked rice mixed with turmeric. The priest bedecked my hands with green bangles, smeared ash, turmeric and vermilion on my forehead. My mother followed suit and smeared my cheeks with turmeric. Aunt put jasmine flowers on my hair. The priest then tied a necklace made of red and white beads around my neck, followed by a a tali (a black needed necklace and a symbol of marriage).
The priest then whispered in my ears, “Today onwards, you are a daughter of the goddess and an offering to her. Any man can ride you. You are free to live with anyone. You are expected to serve the Village Chief. Till you are alive, you are an auspicious, married woman. You are to visit the Savadatti hill every full moon. You are not to work and earn. You are to beg in the name of the goddess.” These words of the priest seemed like words of the goddess herself. I nodded my head in agreement and promised to live such a life.
Dalit families dedicate their daughters to the temples due to several reasons — lack of education and employment, abject poverty, the hold of superstition and traditions are some of them. Childless couples promise to their gods that if they are blessed with a child, she will be dedicated to the temples if it’s a girl. Those who wish to have a son and have only had daughters promise that they’d dedicate one of the girls to the temple. Another superstition is that if a girl child has matted hair, then it is a “calling” from the gods asking her to be dedicated. There are also instances of the priests claiming to be “possessed” and demanding the dedication of some girl child. In most cases, devadasis themselves tell families to dedicate their daughters to temples. Since their words are considered to be sacred, many families do as they are told.
Also Read | The country with dalit blood on its hands: Huchangi Prasad
The lives of most devadasis therefore, continue to be a story of humiliation and exploitation. With no family of their own and fatherless children, the women are subjected to social ridicule on a daily basis. Once dedicated and a part of the system, the devadasis become incapable of depending on manual labour of any kind as no one would want to employ them because of the stigma in society. There is no other way for the women, therefore, but to indulge in begging and sex work. This society has still not found any answers for them. I condemn this Brahmanical system designed to enslave women in the name of devotion.