ಪುರುಷ ಪ್ರಧಾನದ ಹಿಂದು ಧರ್ಮ ಮಹಿಳೆಯನ್ನು ಮಕ್ಕಳನ್ನು ಹೇರುವ ಹಾಗೂ ಲೈಂಗಿಕ ತೃಷೆಯನ್ನು ಈಡೇರಿಸುವ ಕಾರ್ಖಾನೆಗಳಂತೆ ನೋಡುತ್ತದೆ.ಇಲ್ಲಿ ಗಂಡಸು ಮೇಲು ಹೆಂಗಸು ಕೀಳು ಎಂಬಂತೆ ಅಸಮಾನತೆ ಮೊದಲಿನಿಂದಲೂ ನಡೆದುಕೊಂಡೆ ಬಂದಿದೆ.ದೇವರ ಹೆಸರಲ್ಲಿ ಧರ್ಮದ ಬಸುರಲ್ಲಿ ಮಹಿಳೆ ಕೆಳಸ್ಥರದಲ್ಲಿದ್ದಾಳೆ.ಅದರಲ್ಲೂ ದೇವದಾಸಿ ಮಹಿಳೆಯರು ಅಸಮಾನತೆಯಿಂದ ಕಟ್ಟಕಡೆಯಾಗಿ ಬದುಕುತ್ತಿದ್ದಾರೆ.ಶೇಕಡ 80% ರಷ್ಟು ದೇವದಾಸಿಯರು ಸೆಕ್ಸ್ ವರ್ಕನ್ನು ಪ್ರಧಾನ ವೃತ್ತಿಯಾಗಿಸಿಕೊಂಡಿದ್ದಾರೆ.ದೇವರ ಹೆಸರಲ್ಲಿ ಅಮಾಯಕ ಬಾಲಕಿಯರನ್ನು ಕಾಮದ ಚಟ ತೀರಿಸಿಕೊಳ್ಳಲು ಯಲ್ಲಮ್ಮದೇವಿಗೆ ಮುತ್ತು ಕಟ್ಡಿಸಿ ಆಕೆಯನ್ನು ದೇವರಿಗೆ(ಊರ ಪುರುಷರಿಗೆ) ಸೂಳೆ ಬಿಟ್ಟು ಲೈಂಗಿಕ ಸರಕನ್ನಾಗಿ ನಿರ್ಮಿಸುತ್ತಿರುವುದು ದುರಂತವಾಗಿದೆ.ಆಗಾಗಿ ದೇವದಾಸಿಯಾಗಿ ಲೈಂಗಿಕ ವೃತ್ತಿನಿರತಳಾಗಿ ಜೀವಿಸುತ್ತಿರುವ ಯಶೋದಮ್ಮಳ ಜೀವನ ತುಂಬಾ ಶೋಚನೀಯ ಸ್ಥಿತಿಗೆ ಬಂದಿದೆ.ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನಲ್ಲಿ ತಂದೆ ಉಜ್ಜಿನಪ್ಪ ತಾಯಿ ಮಾಯಮ್ಮಳ ಮಗಳಾಗಿ ಜನಿಸಿದ ಯಶೋದಮ್ಮ ಹದಿನಾಲ್ಕು ವರ್ಷದವಳಿದ್ದಾಗ ದೇವದಾಸಿಯಾಗಿ ಅಂದಿನಿಂದ ಇಂದಿನವರೆಗು ಅನೇಕ ಬದುಕಿನ ಏಳುಬೀಳುಗಳನ್ನು ಕಂಡಿದ್ದಾರೆ.
ಬಡತನ ಎಲ್ಲವನ್ನು ಮಾಡಿಸಿ ಬಿಡುತ್ತೆ ಎನ್ನುವ ಈಕೆ ಯಲ್ಲಮ್ಮ ದೇವಿಯ ಪಡಲಿಗೆ ಹೊತ್ತು ಭಿಕ್ಷೆ ಬೇಡುವುದು.ಕಾಮದ ಹಸಿವೆಂದು ಬರುವವರಿಗೆ ಹಸಿವು ನೀಗಿಸುವುದು.ಹೀಗೆ ಬದುಕಿನ ರಥವನ್ನು 40 ವರ್ಷದವರೆಗೆ ಎಳೆದು ತಂದಿದ್ದಾರೆ.ಪ್ರಸ್ತುತ ಲೈಂಗಿಕ ಕಾರ್ಯಕರ್ತೆಯಾಗಿ “ಶ್ರೀ ದುರ್ಗಾ ಶಕ್ತಿ ಏಡ್ಸ್ ತಡೆಗಟ್ಟುವ ಸಂಸ್ಥೆಯಲ್ಲಿ” ಕಾರ್ಯನಿರ್ವಹಿಸುತ್ತಿದ್ದಾರೆ.ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವುದು.ಲೈಂಗಿಕ ಮಹಿಳೆಯರಿಗೆ ಆರೋಗ್ಯದ ಬಗ್ಗೆ ಹೇಳುವುದು ಹೀಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದಾಳೆ.ಇಬ್ಬರು ಹೆಣ್ಣು ಮಕ್ಕಳಿದ್ದು ಕಾಲೇಜು ಶಿಕ್ಷಣ ಒದಿ ಮದುವೆಯಾಗಿ ಗಂಡನ ಮನೆಯಲ್ಲುದ್ದಾರೆ.ದೇವದಾಸಿಯಾಗಿ ಹಾಗೂ ಲೈಂಗಿಕ ಕಾರ್ಯಕರ್ತೆಯಾಗಿರುವ ಯಶೋದಮ್ಮಳನ್ನು ಸಂದರ್ಶಿಸಿದಾಗ ನೊಂದ ಕಣ್ಣೀರಿನ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ.
ನೀವು ದೇವದಾಸಿಯಾಗಿ ಆಗಿದ್ದು ಏಕೆ?
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು.ನಮ್ಮವ್ವ ನಮ್ಮಪ್ಪಗೆ ನಾನು ಒಬ್ಬಳೆ ಮಗಳು.ಅಪ್ಪ ಚಿಕ್ಕ ವಯಸ್ಸಿನಲ್ಲಿಯೆ ತೀರಿದ್ದರು.ತಾಯಿ ಅವರು ಇವರ ಮನೆಗೆ ಕೂಲಿನಾಲಿ ಮಾಡಿ ಜೀವಿಸುತ್ತಿದ್ದಳು.ಒಂದು ದಿನ ಹೊಲದಲ್ಲಿ ಕೂಲಿಗೆ ಅಂತ ಹೋದಳು ಮತ್ತೆ ಮನೆಗೆ ಬರಲೆ ಇಲ್ಲ.ಯವಾನೊ ಒಬ್ಬ ಗಂಡಸ್ಸಿನೊಂದಿಗೆ ಹೋಡಿಹೋಗಿದ್ದಾಳೆ ಎಂದು ಊರ ಮಂದಿ ಮಾತನಾಡಿದರು. ಆಗಿನ್ನು ನನಗೆ ಹದಿನಾಲ್ಕು ವರ್ಷ.ನನ್ನವರು ಅಂತ ಯಾರು ಇರಲಿಲ್ಲ.ಆಗಾಗಿ ನನ್ನ ದೂರದ ಸಂಬಂಧಿಯನ್ನು ಕರೆಸಿ ಊರ ಹಿರಿಯರು ಸೇರಿ ನನ್ನ ದೇವರಿಗೆ ಮೀಸಲಿಡಬೇಕು ಎಂದು ನನಗೆ ಮುತ್ತು ಕಟ್ಟಿಸಿ ಹಸಿರು ಬಳೆ ಹಸಿರು ಸೀರೆ ತೊಡಸಿ ದೇವದಾಸಿಯನ್ನಾಗಿ ಮಾಡಿದರು.ಹರಪನಹಳ್ಳಿ ದಂಡಿ ದುರ್ಗವ್ವನ ಪೂಜಾರಿ ಕೊರಳಿಗೆ ಮುತ್ತು ಕಟ್ಟುವ ಮೂಲಕ ನನ್ನ ದೇವರಿಗೆ ಸಂಪೂರ್ಣವಾಗಿ ಮೀಸಲಿರಿಸಿದ.ಯಾರು ಇಲ್ಲದ ನನಗೆ ದೇವಿಯೆ ಸರ್ವಸ್ವ ಎಂಬಂತೆ ನನ್ನನ್ನು ದೇವದಾಸಿ ಮಾಡಿದರು.
ಆರಂಭಿಕ ದೇವದಾಸಿಯ ದಿನಗಳು ಹೇಗಿದ್ದವು?
ಸ್ಲೇಟು ಬಳಪ ಹಿಡಿದು ಒದಬೇಕಿದ್ದ ನನಗೆ ದೇವರ ಹಡಲಿಗೆ ಕೊಟ್ಟರು.ಒದುವ ನಲಿಯುವ ಕನಸ್ಸುಗಳ ಎಳೆ ವಯಸ್ಸಿನಲ್ಲಿ ಗಂಡಸರೊಂದಿಗೆ ಮಲಗಿ ಚಟತೀರಿಸಿಕೊಳ್ಳುತ್ತಿದ್ದರು.ಪ್ರಥಮ ಸಂಭೋಗವೆಂಬುದು ನರಕ ಸದೃಶ್ಯವಾಗಿತ್ತು.ಬಲವಂತವಾಗಿ ನನ್ನ ಭೋಗಿಸಿದ್ದು ಹಾಸಿಗೆಯೆಲ್ಲಾ ರಕ್ತವಾಗಿತ್ತು.ನಡೆಯಲು ಬರುತ್ತಿರಲಿಲ್ಲ.ಕ್ರೂರಪ್ರಾಣಿಗಳಂತೆ ನನ್ನ ಬಳಸಿಕೊಂಡರು.ಗೌಡ.ಮಾವ.ಚಿಕ್ಕಪ್ಪ.ಅಣ್ಣ.ತಮ್ಮ ಎಲ್ಲರು ನನ್ನೊಂದಿಗೆ ಸಂಭೋಗಿಸಿದ್ದರು.ಕಾಮಕ್ಕೆ ಕಣ್ಣಿಲ್ಲ ಅನ್ನೊ ಮಾತು ನನ್ನ ಬದುಕಲ್ಲಿ ಅಕ್ಷರಶಃ ನಿಜವಾಗಿದೆ.ಊರ ಗಂಡಸರಿಗೆಲ್ಲಾ ರಾತ್ರಿಹೆಂಡತಿಯಾಗಿರುತ್ತಿದ್ದೆ.ದೇವರನ್ನು ತಲೆ ಮೇಲೆ ಹೊತ್ತು ಭಿಕ್ಷೆ ಬೇಡಲು ಹೋದರೆ ನನ್ನ ಚುಡಾಯಿಸುತ್ತ ಅಲ್ಲೆ ಸುಖಿಸಲು ಬರುತ್ತಿದ್ದರು.ಸಮಾಧಾನ ಮಾಡಬೇಕಿದ್ದ ಹೆಂಗಸರು ಅವ್ಯಾಚ್ಚ ಶಬ್ದಗಳಿಂದ ಬೈದು ನಿಂದಿಸುತ್ತಿದ್ದರು.ಭಿಕ್ಷೆ ಹಾಕದೆ ಮುಂದೆ ಹೋಗು ಮುಂದೆ ಹೋಗು ಅನ್ನುತ್ತಿದ್ದರು.ಆಗಾಗಿ ನಾನು ಭಿಕ್ಷೆ ಬೇಡುವುದೆ ಬಿಟ್ಟೆ.ಲೈಂಗಿಕತೆಯನ್ನು ಅನ್ನ ಕೊಡುವ ವೃತ್ತಿಯಾಗಿಸಿಕೊಂಡೆ.ಬಾಲ್ಯದಲ್ಲಿನ ಬದುಕು ನಿಗಿನಿಗಿ ಉರಿವ ಕೆಂಡದಂತಿತ್ತು . ಮುಂಬೈಗೆ ಹೋಗುವತನಕ ಅವಮಾನ ಅಪಮಾನವನ್ನೆ ಹೊದ್ದುಮಲಗುತ್ತಿದ್ದೆ.
ನಿಮಗೆ ಈ ಲೈಂಗಿಕ ವೃತ್ತಿ ಕೀಳು ಎಂದು ಯಾವತ್ತು ಅನಿಸಿಲ್ಲವೆ?
ಯಾಕೆ ಕೀಳು ಅನಿಸುತ್ತೆ.ನನ್ನ ಆಸೆಗಳನ್ನೆಲ್ಲಾ ಕೊಂದು ಸೂಳೆಯನ್ನಾಗಿ ಮಾಡಿದ ಈ ಸಮಾಜದ ಬಗ್ಗೆ ಕೀಳಿರಿಮೆಯಿದೆ.ಬಾಲಕಿ ಎನ್ನದೆ ಸಾಲುಗಟ್ಟಿ ಸಂಭೋಗಿಸುತ್ತಿದ್ದ ಈ ಗಂಡಸೆಂಬ ಜಾತಿಯ ಬಗ್ಗೆ ಕೀಳಿರಿಮೆಯಿದೆ.ನನ್ನ ವೃತ್ತಿ ಬಗ್ಗೆ ಯಾವತ್ತು ಕೀಳು ಅಂತ ಅನಿಸಿಲ್ಲ.ಪ್ರಪಂಚ ಇರೋದೆ ಹೀಗೆ ಎಂಬಂತೆ ನಾನು ಬದುಕುತ್ತಿದ್ದೇನೆ.
ಮುಂಬಯಿಯಲ್ಲಿ ಇದ್ದ ಅನುಭವಗಳನ್ನು ಹೇಳುವಿರಾ?
ಹಾವೇರಿಯ ಗಿರಿಜಕ್ಕ ಎಂಬ ದೇವದಾಸಿ ನನಗೆ ಯಲ್ಲಮ್ಮನ ಗುಡ್ಡದಲ್ಲಿ ಪರಿಚಯವಾಗಿದ್ದಳು.ನಮ್ಮ ಪರಿಚಯ ಸ್ನೇಹಕ್ಕೆ ತಿರುಗಿ ಬಹಳ ಅನ್ಯೋನ್ಯತೆಯಿಂದ ಇದ್ದೀವಿ.ಆಕೆ ನನ್ನ ಮುಂಬಯಿಗೆ ಹೋದರೆ ಬಹಳ ದುಡಿಬಹುದು ಬಾ ಹೋಗೋಣ ನಾನು ಬರ್ತಿನಿ ಅಂದಳು.ನಾನು ಸಹ ಒಲ್ಲದ ಮನಸ್ಸಲ್ಲೆ ಒಪ್ಪಿದೆ.ನನ್ನ ಮಗಳನ್ನು ಗಿರಿಜಕ್ಕಳ ತಾಯಿ ಮನೆಯಲ್ಲಿ ಬಿಟ್ಟು ಮುಂಬಯಿಗೆ ಹೋದೆವು.ಅಲ್ಲಿ ಯಾವುದೆ ನಾಚಿಕೆ ಇರ್ತಿರಲಿಲ್ಲ.ದೊಡ್ಡದೊಡ್ಡ ಗಂಡಸರು ಬಂದು ಕೆಲಸ ಮುಗಿಸಿಕೊಂಡು ಹೋಗುತ್ತಿದ್ದರು. ಕೆಲವರು ಪ್ರೀತಿಯಿಂದ ಕಷ್ಟಸುಖ ಕೇಳುತ್ತಾ ಭೋಗಿಸಿದರೆ ಇನ್ನು ಹಲವಾರು ಗಂಡಸರು ತುಂಬಾ ಕ್ರೌರ್ಯದಿಂದ ಒತ್ತಾಯದಿಂದ ವಿಚಿತ್ರ ಹಿಂಸೆಕೊಟ್ಟು ಸಂಭೋಗಿಸುತ್ತಿದ್ದರು.ಅಲ್ಲಿ ಹಣಕ್ಕೆ ಮಾತ್ರ ಗೌರವ.ಮನುಷ್ಯರಿಗೆ ಬೆಲೆನೆ ಇಲ್ಲ.ನಾವು ಮನುಷ್ಯರು ಅಂತ ಗಿರಾಕಿಗಳು ಯಾವತ್ತು ತಿಳಿಯುತ್ತಿರಲಿಲ್ಲ.ಕೆಲವೊಮ್ಮೆ ಮಹಾರಾಷ್ಟ್ರದ ಪೋಲಿಸ್ ಹಾಗೂ ರೌಡಿಗಳು ಬಂದು ಚಟ ತೀರಿಸಿಕೊಳ್ಳುತ್ತಿದ್ದರು.ನಾನು hiv ಪಾಸೀಟಿವ್ ಆಗಿದ್ದು ಮುಂಬಯಿನಲ್ಲೆ.ಮುಂಬಯಿಗೆ ಹೋದ ಪ್ರತಿ ಸೆಕ್ಸ್ ವರ್ಕರ್ಸ್ ಗೆ HIV ಕಡ್ಡಾಯವಾಗಿ ಮದುಮಗನಾಗಿ ಮದುವೆ ಮಾಡಿಕೊಳ್ಳುತ್ತೆ.ನಮ್ಮ ಕೊನೆಗಾಲದಲ್ಲಿ Hiv ಯೆ ಗಂಡನಾಗಿರುತ್ತಾನೆ.
ಪ್ರಸ್ತುತ ನಿಮ್ಮ ಜೀವನ ಹೇಗಿದೆ.
ಹೋರಾಟದ ಬದುಕಿನಲ್ಲಿ ನಾನು ಇಂದಿಗು ಹೋರಾಡುತ್ತಲೆ ಇದಿನಿ.ತುತ್ತು ಅನ್ನ ನನ್ನ ಬಾಳಲ್ಲಿ ಬಹಳಷ್ಟು ನೋವುನಲಿವಿನ ಪಾಠಗಳನ್ನು ಕಲಿಸಿದೆ.ತಂದೆತಾಯಿ ಇಲ್ಲದ ಮಗಳು ಯಾವತ್ತು ಭೂಮಿ ಮೇಲೆ ಬದುಕಿರಬಾರದು ಎಂಬುದು ನನ್ನನ್ನು ಇಂದಿಗು ಕಾಡುವ ಪ್ರಶ್ನೆ.ದುಃಖ ಹಂಚಿಕೊಳ್ಳುವ ಮನುಷ್ಯರು ಒಬ್ಬರು ನನಗೆ ಕಾಣಿಸಲೆ ಇಲ್ಲ.ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿದ್ದಾರೆ.ಅವರ ಗಂಡಂದಿರು ಇಂದಿಗೂ ಅವರನ್ನು ನನ್ನ ಬಳಿ ಕಳಿಸಿಲ್ಲ.ಯಾವ ಮಕ್ಕಳಿಗೆ ನಾನು ದುಡಿದು ತರುತ್ತಿದ್ದೆನೊ ಅವರೆ ನನ್ನೊಂದಿಗೆ ಮಾತನಾಡದೆ ಬಹು ದೂರ ಇದ್ದಾರೆ.ನಾನು ಯಾವ ಜನ್ಮದಲ್ಲಿ ಪಾಪ ಮಾಡಿದ್ನೊ ಗೊತ್ತಿಲ್ಲ ಈ ಜನ್ಮದಲ್ಲಿ ಬಹಳ ಕಷ್ಟ ಅನುಭವಿಸುತ್ತಾ ಇದಿನಿ.ಮೊದಲಿನಿಂದಲು ಒಂಟಿತನ ನನ್ನ ಬಹಳ ಗಟ್ಟಿ ಮಾಡಿದೆ.ಇದೀಗ Hiv ಸೋಕಿತರಿಗಾಗಿ ಕೆಲಸ ಮಾಡುತ್ತಿದ್ದೇನೆ.ಜೊತೆಗೆ ಸೋಕಿತರಿಗೆ ವಿಶೇಷ ಸೌಲಭ್ಯಗಳನ್ನು ಕೊಡಿಸುವ ಅವರ ಕಷ್ಟ ಸುಖಗಳಿಗೆ ಬಾಗಿಯಾಗುತ್ತ ಇದರಲ್ಲಿ ತೃಪ್ತಿ ಕಾಣುತ್ತಿದ್ದೇನೆ.
ಸರ್ಕಾರಕ್ಕೆ ನೀವೊಬ್ಬರು ದೇವದಾಸಿಯಾಗಿ ಒಬ್ಬ ಸೆಕ್ಸ್ ವರ್ಕರ್ಸ್ ಆಗಿ ಏನು ಹೇಳಲು ಇಚ್ಚಿಸುತ್ತೀರಿ..?
ಸರ್ಕಾರಗಳ ನಿರ್ಲಕ್ಷ್ಯವೆ ಇವತ್ತು ಈ ಅನಿಷ್ಟ ಪದ್ದತಿಗಳು ಇನ್ನು ಜೀವಂತ ಇರುವುದುಕ್ಕೆ ಸಾಧ್ಯ.ಈ ದೇವದಾಸಿ ಪದ್ದತಿಯನ್ನು ಬೇರುಮಟ್ಟ ಕೀಳಬೇಕು.ದೇವದಾಸಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ವಿಶೇಷ ಸೌಲಭ್ಯಗಳನ್ನು ಕೊಡಬೇಕು. ಸ್ವಂತ ಜೀವನ ಮಾಡಲು ಭೂಮಿ.ಮನೆ ಸೈಟು ಕೊಡಬೇಕು .Hiv ಸೋಂಕಿತ ರಿಗೆ ರಕ್ಷಣೆ ನೀಡಬೇಕು ಅವರ ಆರೋಗ್ಯಧಾಯಕ ಜೀವನ ಮಾಡಲು ತಿಂಗಳಿಗೆ 6000 ರೂಗಳನ್ನು ಕೊಡಬೇಕು.ಔಷದಿ ಹಾಗೂ ಟೆಸ್ಟ್ ಗಳನ್ನು ಉಚಿತವಾಗಿ ಮಾಡಬೇಕು.Hiv ಪೀಡಿತ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಸ್ಕಾಲರ್ಶಿಪ್ ಬಟ್ಟೆ ಪುಸ್ತಕ ಕೊಡಬೇಕು.ಇವರಿಗೆ ಪ್ರತ್ಯೇಕ ಶಾಲಾಕಾಲೇಜುಗಳನ್ನು ನಿರ್ಮಿಸಬೇಕು.ಸೋಂಕಿತ ಬಡತನದ ವಿದ್ಯಾವಂತರಿಗೆ ಸರ್ಕಾರಿ ನೌಕರಿ ಕೊಡಬೇಕು.ಆರೋಗ್ಯ ಜೀವನ ಮಾಡುವ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ಕೂಡಲೆ ಕೊಡಬೇಕು.
ಈ ದೇವದಾಸಿ ಪದ್ದತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ಹೆಸರಿಗೆ ಮಾತ್ರ ದೇವದಾಸಿ ಆಂತರಿಕವಾಗಿ ಇದು “ದೇಹಗಳ ದಾಸಿ” ಇಲ್ಲಿ ದೇವರ ಹೆಸರಿನಲ್ಲಿ ಕ್ರೂರ ಮೃಗ ಗಳು ಹೆಣೆದಿರುವ ಮೋಸದ ಬಲೆ ನಮ್ಮಂತವರು ಜಿಂಕೆಗಳಂತೆ ಇವರಿಗೆ ಆಹಾರ ಆಗುತ್ತೇವೆ.ದೇವರ ಹೆಸರಿನಲ್ಲಿ ಮಾಡುವ “ಸೂಳೆಗಾರಿಕೆ” ಇದೊಂದು ನೀಚ ಕೃತ್ಯ. ಮುಗ್ದಬಾಲಕಿಯರನ್ನು ಅತ್ಯಚಾರಗೈಯ್ಯುವ ವ್ಯವಸ್ಥಿತ ಪಿತೂರಿ.
ಕರೋನದ ಲಾಕ್ ಡೌನ್ ಸಂದರ್ಭದಲ್ಲಿ ನಿಮ್ಮ ಜೀವನ ಹೇಗಿದೆ
ಏನು ಅಂತ ಹೇಳೋದು ಬಿಡಪ್ಪಾ.ಲಾಕ್ ಡೌನ್ ನಮ್ಮಂತವರಿಗೆ ಬಹಳ ಕಷ್ಟ ಕೊಟ್ಟಿದೆ ಈ ಲಜ್ಜೆಗೆಟ್ಟ ಸರ್ಕಾರಗಳು ನಮ್ಮಂತವರಿಗೆ ಯಾವುದೆ ಪ್ಯಾಕೇಜ್ ಗಳನ್ನು ಘೋಷಿಸಿಲ್ಲ.ಮೊದಲು HIV ಪೀಡಿತರಿಗೆ ಪರಿಹಾರ ಕೊಡಬೇಕಿತ್ತು ಆದನ್ನು ಬಿಟ್ಟು ಆ ಪೂಜೆ ಮಾಡುವ ಬ್ರಾಹ್ಮಣರಿಗೆ ಕಿಟ್ ಜೊಡ್ತಾ ಇದ್ದಾರೆ.ನಮಗೆ ಕೆಲಸವಿಲ್ಲ.ಬಾಡಿಗೆ ಕಟ್ಟಲು ಹಣವಿಲ್ಲ.ಮೂರೊತ್ತು ಉಣ್ಣಲು ಅನ್ನವಿಲ್ಲದೆ ಕೆಲವು ಸ್ಥಳೀಯ ದಾನಿಗಳು ಕೊಟ್ಟ ಆಹಾರದ ಕಿಟ್ಟು ನಮ್ಮ ಜೀವನ ಉಳಿಸಿದೆ.ಬಡವರಿಗೆ ಕರೋನ ಬಂದರೆ ಬೆಡ್ ಗಳು ಸಿಗುತ್ತಿಲ್ಲ.ಆಕ್ಸಿಜನ್ ಕೊರತೆ ಹೆಚ್ಚಿದೆ.ಎಷ್ಟೋ ಹತ್ತಿರದವರು ನಮ್ಮ ಕಣ್ಣೆದುರಿಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.ಆದರೆ ಈ ಸರ್ಕಾರ ಮಾತ್ರ ಭರವಸೆಯ ಬೆಂಕಿಯಲ್ಲಿ ಸುಟ್ಟುಬೂದಿ ಮಾಡುತ್ತಿದ್ದಾರೆ.ನಮ್ಮಂತ ಬಡವರ ಬದುಕು ತುಂಬಾ ಶೋಚನೀಯವಾಗಿದೆ.ಇದಕ್ಕೆಲ್ಲಾ ಸರ್ಕಾರಗಳೆ ನೇರ ಹೊಣೆಗಾರಿಕೆ.
Translation
At least around 80 percent of devadasis are primarily sex workers. In Karnataka, innocent young girls are “dedicated” to the goddess Yellamma, with “sacred” beads tied around their necks. In the name of god and religion, these girls are then pushed to sexwork and declared to be property of the men in the village. Yashodamma is one such devadasi and her life is currently in a miserable state.
Born in the Harapanahalli taluk of Davanagere district to Ujjinappa and Mayamma, Yashodamma was “dedicated” to the goddess at the age of fourteen. She soon began to beg on the streets and carry out sex work. “Poverty makes you do anything and everything,” she says. A forty year old woman today, Yashodamma is a sexual health activist with the Sri Durga Devi AIDS Prevention Organisation, where she educates sex workers about AIDS. She has two daughters — both are graduates and married. I spoke to her about her life and the challenges she has had to face in it so far.
Huchangi Prasad (HP): Why did you become a devadasi?
Yashodamma (Y): My family lived in utter poverty and I was the only daughter. My father died when I was very young and my mother worked as a house help, as a daily wage labourer. One day, my mother did not return home from the fields she had gone to work in. The village accused her of eloping with a man. I was just fourteen then and I did not have anyone. The village elders, along with my distant relatives, decided to “dedicate” me to the gods. They tied the beads around my neck, draped me a green saree, made me wear green bangles and made me a devadasi. The priest was from the Dandi Durgavva temple in Harapanahalli. I had no one to care for me and it was believed that the Devi (goddess) would look after me once I was “dedicated” to her.
HP: What do you think of the devadasi system?
Y: It is called “devadasi” for name sake, however in reality, it is “dehagala dasi” (servant to the bodies). In the name of god, innocents like us are hunted down and preyed upon. It is simply prostitution.
HP: What are your earliest memories as a devadasi?
Y: Instead of a slate and a chalk to write and learn, I was given the ritual palanquin of the goddess. In that young age, instead of building my dreams or playing games, I provided sexual services to men.
Once I was sexually abused and unable to walk. All the men from the village headman’s family forced themselves on me. I was a wife for every man in the village. While I would go out begging with the idol of the goddess on my head, men would harass me on the streets. No woman came to my rescue, in fact they would verbally abuse me. They would not give me any alms. Eventually, I had to give up begging and take up sex work as my source of income.
Childhood was nothing but a nightmare. Up until travelling to Mumbai, everyday was an embarrassment.
HP: Did you see sex work as inferior when you used to do it?
Y: Why would I see it as inferior? I dont have any regards for this society, for it killed my wishes and dreams and made me a sex worker. Such a society is inferior. Those men who lined up to have sex with me when I was a little girl are inferior. I never felt that my work was inferior. I have accepted that the world is like the way it is and that I will continue to live my life.
HP: How was your life like in Mumbai?
Y: I initially met Girijakka, a devadasi, from Haveri in the hill of Yellamma. We are good friends till date. She had told me that we could earn well in Mumbai and convinced me to go there along with her. Though reluctant, I ended up agreeing to this. I left my daughter at Girijakka’s mother’s house and left for Mumbai.
I was not ashamed there. Elderly men would visit me and do what they were there for and leave. Some men would share their difficulties with me and have sex, and some others would abuse me. It was only money that was respected there and human bodies commanded no respect. Our customers never saw us as fellow human beings. In fact, even the Maharashtra police and the city’s goons were among my customers. Once I was tested HIV positive like many sex workers in Mumbai. You see, it is HIV that gets married to us sex workers.
HP: How is your life now?
Y: I am still struggling. However, searching for a morsel of food has taught me several life lessons. Even to this day, I wonder if an orphan like me should live on the face of this earth. I had no one to share difficulties in my life with when I was young. Both my daughters are married, but even today, their husbands don’t let them meet me. I worked hard to feed my children, yet today, they are far away from me and don’t talk to me.
At the same time, all this loneliness has made me strong. I am currently working for women who are HIV-infected. I work to make facilities available for these women. I see satisfaction in working with and for them. I am there for them to talk to.
HP: As a devadasi and a sexworker, what have you got to say to our governments?
Y: It is the government’s negligence that is keeping these evil customs alive. The devadasi system has to be uprooted. The governments have to provide devadasis and sexual minorities with facilities like land and housing.
Moreover, the HIV-infected must be provided with suitable medical care and at least Rs. 6000 as monthly remuneration to ensure a comfortable life. Testing and medication must be provided free of cost. HIV-positive children must be provided with scholarships and free education, along with should be provided with special schools and colleges. The educated poor among HIV positive persons must be given employment. These are basic demands.
HP: How has the pandemic and the multiple lockdowns affected your life?
Y: The lockdowns have made the lives of people like us quite difficult. These shameless governments haven’t announced any package for people like us. They should have provided for the HIV positive persons, but they are interested only in the privileged. We have got no work or money to pay our rents. Food kits provided by charity organisations have been filling our stomachs. The poor are not getting beds in hospitals. Oxygen shortage is real. Many of our close acquaintances and relations have lost their lives in front of us. This government is just making false promises and turning the poor into ashes.