ಕರ್ನಾಟಕದಲ್ಲಿ1974 ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂದಿನ ದಲಿತರ ಮೇಲೆ ಮೇಲ್ಜಾತಿಗಳ ದೌರ್ಜನ್ಯಗಳು ದಬ್ಬಾಳಿಕೆಗಳು,ಅಸ್ಪೃಶ್ಯತೆ ಆಚರಣೆಗಳು, ವಿರುದ್ದ ತೊಡೆತಟ್ಟಿ ಪ್ರತಿರೋಧ ಉಂಟುಮಾಡುವ ಸಲುವಾಗಿ ಆರಂಭಗೊಳ್ಳುತ್ತದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಾದ ಪ್ರೊ.ಬಿ.ಕೃಷ್ಣಪ್ಪರವರು ನಾಡಿನ ಲಕ್ಷಾಂತರ ಶೋಷಿತ ಧ್ವನಿಗಳಿಗೆ ಧ್ವನಿಯಾದರು. ಚದುರಿದ್ದ ಜನಗಳನ್ನು ಒಂದೆಡೆ ತಂದು ನಾಡಿನ ದಲಿತರಲ್ಲಿ ಸಂಘಟನೆಯನ್ನು ಮತ್ತು ಪ್ರಜ್ಞಾವಂತಿಕೆಯನ್ನು ಬೆಳೆಸಿದರು.ಮಾತನಾಡಲು ಅಂಜುವ ಜನರಲ್ಲಿ ಘರ್ಜಿಸುವ ಧೈರ್ಯ ಕೊಟ್ಟರು. ಅಂಬೇಡ್ಕರ್ ಚಳುವಳಿಯನ್ನು ಮನೆಮನೆಗೆ ತಲುಪಿಸಿದವರು ಬಿ.ಕೃಷ್ಣಪ್ಪ.
ರಾಜ್ಯದ ಪ್ರತಿ ಹಳ್ಳಿಗಳಲ್ಲಿ ದಲಿತ ಕೇರಿಗಳಲ್ಲಿ ಪ್ರತಿದಿನ ಸಮಿತಿಯ ಹಾಡುಗಳು ಮಾರ್ದನಿಸುತ್ತಿದ್ದವು.ಆಗ ಸಮಿತಿ ಒಂದು ಕರೆ ಕೊಟ್ಟರೆ ಹಳ್ಳಿಹಳ್ಳಿಗಳಲ್ಲಿ ನೂರಾರು ಯುವಕರು ದಲಿತ ಹಾಡುಗಳನ್ನು ಹಾಡುತ್ತಾ ಯುವಕರನ್ನು ಸಂಘಟನೆಗೆ ಸಜ್ಜು ಮಾಡುತ್ತಿದ್ದರು. ಇಂತಹ ಕಾಲಘಟ್ಟದಲ್ಲಿ ಚಳುವಳಿಯೊಂದಿಗೆ ತೊಡಗಿಸಿಕೊಂಡುವರು ಅನೇಕ ಹೋರಾಟಗಾರರು ಹಾಡುಗಾರರಾಗಿ, ಕವಿಗಳಾಗಿ, ಸಾಹಿತಿಗಳಾಗಿ, ಬರಹಗಾರಾಗಿ ರೂಪಗೊಂಡರು. ಅಂತಹವರಲ್ಲಿ ಎಮ್.ಕೆ ನಾಗಪ್ಪರು ಒಬ್ಬರಾಗಿದ್ದರು.
ಅಂದಿನ ಶಿವಮೊಗ್ಗ ಜಿಲ್ಲೆಯ (ಇಂದು ದಾವಣಗೆರೆ) ಚನ್ನಗಿರಿ ತಾಲೂಕಿನ ಮಲಹಾಳ್ ಗ್ರಾಮದಲ್ಲಿ ಗೌರಮ್ಮ ಮತ್ತು ಕರಿಯಪ್ಪರವರ ಮಗನಾಗಿ ಜನಿಸಿದರು. ಮೂಲತಃ ಶಿಕ್ಷಕರಾಗಿದ್ದರು.ದಲಿತ ಚಳುವಳಿ. ಅಂಬೇಡ್ಕರ್ ಹಾಡುಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅಂಬೇಡ್ಕರ್ ಚಳುವಳಿಯ ಹೋರಾಟಗಾರರ ಜೊತೆಗೆ ಅದ್ಭುತ ಕಂಚಿನ ಕಂಠದ ಹಾಡುಗಾರರಾಗಿ ಪ್ರಸಿದ್ಧಿ ಯನ್ನು ಪಡೆದುಕೊಂಡಿದ್ದರು.ಆಂದ್ರ ದಲ್ಲಿ ಗದ್ದರ್ ಹೇಳುತ್ತಿದ್ದ ಹಾಡುಗಳು ಕನ್ನಡದಲ್ಲಿ ಅನುವಾದಿಸಿ ಹೋರಾಟದಲ್ಲಿ ಹಾಡುತ್ತಿದ್ದ ಎಮ್.ಕೆ.ನಾಗಪ್ಪ ರವರು ಚಳುವಳಿಯ ಪ್ರಮುಖ ಹಾಡುಗಾರರಲ್ಲಿ ಒಬ್ಬರಾಗಿದ್ದರು.
1978 -79 ರಲ್ಲಿ ಬೆಂಗಳೂರಲ್ಲಿ ಸುಮಾರು 10 ಲಕ್ಷ ದಲಿತರು ಸೇರಿ ದಲಿತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬಿ.ಕೃಷ್ಣಪ್ಪರವರ ನೇತೃತ್ವದಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದರು ದಲಿತ ಕವಿ ಸಿದ್ದಲಿಂಗಯ್ಯರವರ
“ಆಕಾಶವ ಎತ್ತಿ ನಿಲ್ಲಿಸಿ
ನೀಲಿಯಾಗಿ ನಿಂತವರೆ
ಕಪ್ಪು ನೆಲವ ಕೆಂಪು ಮಾಡಿ
ಬಾಳೆಯಾಗಿ ಅರಳಿದವರೆ…ಎಂಬ ಹಾಡನ್ನು ನಾನು ಮತ್ತು ಕವಿ ಚನ್ನಣ್ಣ ವಾಲೇಕಾರರವರ ಜೊತೆಗೆ ಪ್ರಥಮವಾಗಿ ರಾಗಸಂಯೋಜನೆ ಮಾಡಿ ಅಲ್ಲೆ ಹಾಡಿದೆ ಎನ್ನುವ ನಾಗಪ್ಪ ನವರು ತಮ್ಮ ಹಳೆ ನೆನಪುಗಳನ್ನು ಬಿಚ್ಚಿಡುತ್ತಾರೆ. ಆಗ ಚಳುವಳಿಯಲ್ಲಿ ಭಾಗವಹಿಸುವುದೆ ದೇಹಕ್ಕೆ ಕರೆಂಟ್ ಚಾರ್ಜ್ ಮಾಡಿಸಿದಂತಾಗುತ್ತಿತ್ತು.ಅಂದು ಅನ್ನ, ನೀರು, ದಣಿವು, ಏನು ಬಾದಿಸುತ್ತಿರಲಿಲ್ಲ.ಎಲ್ಲಿಂದ ಎಲ್ಲಿಗೆ ಬೇಕಾದರೂ ಹಾಡುತ್ತಾ ನಡೆಯುವ ಓಡುವ ಮನಸ್ಸು ಎಲ್ಲರದ್ದಾಗಿತ್ತು.ಮೈರೋಮಂಚನಗೊಡು ನದಿ ಉಕ್ಕಿ ಹರಿದಂತೆ ಹೋರಾಟಗಾರರ ಹೋರಾಟಗಳು ಮುಗಿಲು ಮುಟ್ಟುತ್ತಿದ್ದವು.ಅಂದು ಅಂಬೇಡ್ಕರ್ ಚಳುವಳಿ ಎಂದರೆ ದಲಿತ ವಿದ್ಯಾರ್ಥಿ ಚಳುವಳಿ ಆಗಿತ್ತು.ಹಳ್ಳಿ ತೊರೆದು ನಗರದ ಹಾಸ್ಟೆಲ್ ಗಳಲ್ಲಿ ಓದುವ ದಲಿತ ವಿದ್ಯಾರ್ಥಿಗಳು ಹೋರಾಟದ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು. ಪಿ ಲಂಕೇಶ್ .ಬಿ.ಕೃಷ್ಣಪ್ಪ ರವರು ಪ್ರಗತಿಪರ ಮನಸ್ಸುಗಳನ್ನು ಒಗ್ಗೊಡಿಸಿಕೊಂಡು ” ಸಮಾನ ಮನಸ್ಕರರ ವಿಚಾರ ವೇದಿಕೆ “ಕಟ್ಟಿದ್ದರು. ಬಿ.ಕೃಷ್ಣಪ್ಪ, ಲಂಕೇಶ್, ಇಂದೂದರ ಹೊನ್ನಪುರ, ಮಂಗಳೂರು ವಿಜಯ, ಎಮ್.ಜಯ್ಯಣ್ಣ ಮುಂತಾದವರೆಲ್ಲಾ ಸೇರಿ ಚಿತ್ರದುರ್ಗದಲ್ಲಿ ಮೂರು ದಿನ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಿದ್ದರು. ನೂರಾರು ಯುವಕರು .ವಿದ್ಯಾರ್ಥಿಗಳು ಆ ಶಿಬಿರದಲ್ಲಿ ಭಾಗವಹಿಸಿದರು. ಹೋರಾಟದ ಕಿಚ್ಚು ಹೆಚ್ಚಾಗಿ ಆರಂಭವಾದ ಆ ಶಿಬಿರದಲ್ಲಿ ಮೂರು ದಿನ ಸಂಪೂರ್ಣ ಹಾಡುಗಳನ್ನು ಹೇಳುವ ಜವಾಬ್ದಾರಿಯನ್ನು ಲಂಕೇಶ್ ನನಗೆ ವಹಿಸಿದ್ದರು. ಆ ತರಬೇತಿ ಶಿಬಿರದಲ್ಲಿ ನನ್ನನ್ನು ಜನಪರ ಹಾಡುಗಾರರನ್ನಾಗಿ ರೂಪಿಸಿದ ಕೀರ್ತಿ ಪಿ.ಲಂಕೇಶ್. ಬಿ ಕೃಷ್ಣಪ್ಪ ಗೆ ಸಲ್ಲುತ್ತದೆ. ಎಂದು ಹೇಳುವ ನಾಗಪ್ಪ ಒಬ್ಬ ದೊಡ್ಡ ಹಾಡುಗಾರರಾಗಿ ರೂಪಗೊಂಡರು.
ನೀವು ಹಾಡುತ್ತಿದ್ದ ಹಾಡುಗಳು ಹೇಗಿದ್ದವು..?ಯಾವ ವಸ್ತುಗಳನ್ನು ಹಾಡಿನಲ್ಲಿ ಹೆಚ್ಚಾಗಿ ಬರೆಯುತ್ತಿದ್ದರು ಎಂಬ ಪ್ರಶ್ನೆಗೆ ನಾಗಪ್ಪನವರು ಹೀಗೆ ಉತ್ತರಿಸುತ್ತಾರೆ: ದಲಿತ ಸಂಘರ್ಷ ಸಮಿತಿಯ ಹಳ್ಳಿಯ ಮಟ್ಟದಲ್ಲಿ ತನ್ನ ಮೊದಲ ಹೆಜ್ಜೆಯನ್ನು ಪ್ರಾಂಬಿಸಲು ಬುನಾದಿಯಾದ ಪರಿಣಾಮವಾಗಿ ನಾಡಿನ ಜ್ವಲಂತ ಸಮಸ್ಯಗಳಾದ ಅಸ್ಪೃಶ್ಯತೆ. ದೇವಸ್ಥಾನ ಪ್ರವೇಶ. ಹೋಟೆಲ್ ಪ್ರವೇಶ. ಬೆತ್ತಲೆ ಸೇವೆ. ದೇವದಾಸಿ ಪದ್ಧತಿ. ಬಡತನ. ಹಸಿವು. ಶಾಲೆ ಬಿಟ್ಟು ದುಡಿಯುತ್ತಿದ್ದ ಮಕ್ಕಳ ಪರಿಸ್ಥಿತಿಗಳು. ಅನಕ್ಷರಸ್ಥ ಅಸಹಾಯಕ ಜನರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳು. ಬಗರ್ ಹುಕಂ ಹೋರಾಟಗಳು ದಲಿತರ ಹೋರಾಟದಲ್ಲಿ ಮನೆ ಮಾತಾಗಿದ್ದವು.ಅಂಬೇಡ್ಕರ್ ವಿಚಾರಧಾರೆಗಳನ್ನು ಹೊತ್ತ ಸಮಿತಿಯವರು ಹಳ್ಳಿಹಳ್ಳಿಗೆ ತಲುಪಿಸಿದರು.ಅದಕ್ಕೆ ಪೂರಕ ಎಂಬಂತೆ ದಲಿತರ ಸಾಂಸ್ಕೃತಿಕ ಹಾಡುಗಳು ಹಬ್ಬಹರಿದಿನಗಳು ಹಾಡಿಗೆ ಸ್ಪೂರ್ತಿ ಕೊಟ್ಟವು.ಸಿದ್ದಲಿಂಗಯ್ಯ. ದೇವನೂರು ಮಹಾದೇವ. ಜಂಬಣ್ಣ ಅಮರಚಿಂತ ಭೋಳುಬಂಡೆಪ್ಪ.ಇವರುಗಳ ಹೋರಾಟದ ಸಾಹಿತ್ಯದ ಜೊತೆಗೆ ಹೋರಾಟದ ಹಾಡುಗಳು ನಮ್ಮ ನೆಲದಲ್ಲಿ ಹುಟ್ಟಿ ಬರಲು ಹೋರಾಟಗಳು ಸ್ಪೂರ್ತಿ ಸೆಲೆಯಾದವು.
ನಾಡ ನಡುವಿನಿಂದ ಸಿಡಿದ ನೋವಿನ ಕೋಗೆ
ಆಕಾಶದ ಅಗಲಕ್ಕು ನಿಂತ ಆಲವೆ.
ಕೋಟಿ ಕೋಟಿ ಕಪ್ಪು ಜನರ
ಮೊಟ್ಟ ಮೊದಲ ಮಾತೆ
ನೀರಿನಾಚೆ ಮೋಡದಾಚೆ ಮೊಳಗಿದಂತ ಘೋಷವೆ.
ಎಂದು ಅಂಬೇಡ್ಕರ್ ಬಗ್ಗೆ ಹಾಡುತ್ತಿದ್ದ ಹಾಡುಗಳು ಜನರಲ್ಲಿ ಅಂಬೇಡ್ಕರ್ ಸಾಧನೆಯನ್ನು ಶೇಕರಿಸುತ್ತಿತ್ತು.
80 ರ ದಶಕದಲ್ಲಿ ಆಂದ್ರದ ಜನ ನಾಟ್ಯ ಮಂಡಳಿ ಕ್ರಾಂತಿಕಾರಿ ಕವಿ ಗದ್ದರ್ ರವರನ್ನು ಕರ್ನಾಟಕದಲ್ಲಿ ಪ್ರಥಮವಾಗಿ ಪ್ರತ್ಯಕ್ಷವಾಗಿ ನೋಡಲು ಅವಕಾಶ ಸಿಕ್ಕಿತು. ಆಗ ಜನಪರ ಸಾಹಿತ್ಯದ ಒಳತಿರುಳು ರಾಗವಾಗಿ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸಿ ಯೋಚಿಸುವ ಹಾಡುಗಳು ಹೊರಬಂದವು. ಎನ್ನುತ್ತಾರೆ ಮುಂದುವರೆದು” ನನ್ನ ಪ್ರತಿಯೊಂದು ಹಾಡುಗಳ ತಾಲಿಮು ನಡೆಯುತ್ತಿದ್ದು ಹೋರಾಟಗಾರ ಮಧ್ಯದಲ್ಲಿ. ಹಸಿದ ಜನರ ನಡುವೆಯಲ್ಲಿ. “ನೆತ್ತರದ ಹೊಳೆಯಲ್ಲಿ ಕತ್ತೆತ್ತಿದ ಹಾಡು” ಎಂಬ ಹಾಡು ಊರುಕೇರಿಗಳಲ್ಲ ಸುಳಿದಾಡಿ ಹೋರಾಟಗಾರರ ಎದೆಯೊಳಗೆ ಸ್ಪೂರ್ತಿ ಕೊಟ್ಟಿತು.
ಎಲ್ಲಿದ್ದರೊ ಅವರು ಹೆಂಗಿದ್ದರೊ ಅವರು
ಎಚ್ಚೆತ್ತ ಸಿಂಹಗಳು ನನ್ನ ಜನರು
ಎಷ್ಟು ಲೋಕದ ಕನಸ್ಸು ಕಾಣುತ್ತಿದ್ದರೊ ಅವರು
ಎದ್ದ ಬಿರುಗಾಳಿಗಳ ನನ್ನ ಜನರು.
ಎಂಬ ಹಾಡು ಎಲ್ಲರನ್ನು ಎಚ್ಚರಿಸುತ್ತಿತ್ತು ನಾನು ಹಾಡುತ್ತಿದ್ದ ಹಾಡುಗಳು ನನ್ನ ಜನರ ಎದೆಯ ಬ್ಯಾನಿಯನ್ನು ಹೇಳುತ್ತಿದ್ದವು.ಜನರ ನೋವುಗಳು ನನ್ನ ನೋವುಗಳು ಒಂದೆ ಆಗಿದ್ದು ನಾನು ಬರೆದು ಹಾಡುವ ಹಾಡು ಹೋರಾಟಗಾರರ ಹೃದಯವನ್ನು ನಾಟುತ್ತಿದ್ದವು.”
” ಈ ಮಣ್ಣ ಮಕ್ಕಳು ನಾವು
ನಿಮ್ಮೊಡಲ ಉಸಿರೇ ನಮ್ಮ ಹಾಡು
ಹಾಡು ಹಾಡುವ ಮುನ್ನ ದನಿಗೂಡ ಬನ್ನಿ
ಓ..ಬನ್ನಿ ಬಂಧುಗಳೆ ಕ್ರಾಂತಿ ಪಥಕೆ.
ಎಂಬಂತ ಹಾಡುಗಳು ಹೋರಾಟಗಾರರನ್ನು ಒಂದುಗೂಡಿಸುತ್ತಿತ್ತು” ಎಂದು ಹಳೆ ನೆನಪುಗಳನ್ನು ಎಳೆಎಳೆಯಾಗಿ ಬಿಚ್ಚಿದ್ದಾರೆ ದಲಿತ ಹಾಡುಗಾರ ಎಮ್. ಕೆ ನಾಗಪ್ಪರವರು ದಲಿತ ಚಳುವಳಿ ಯ ಆರಂಭದ ಹಾಡುಗಾರರಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದಾರೆ.ನಾಡಿನ ಮೂಲೆಮೂಲೆಗಳಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಾಗೂ ದಲಿತ ಚಳವಳಿಗಳು ಎಲ್ಲೆ ನಡೆದರೂ ಅಲ್ಲಿ ಎಮ್.ಕೆ.ನಾಗಪ್ಪನವರ ಹಾಡುಗಳು ಇಂದಿಗೂ ರಾರಾಜಿಸುತ್ತವೆ.
Translation
The Karnataka Dalit Sangharsh Samiti was established in 1974 to challenge caste based oppression, atrocities and untouchability. Its founder, Prof. B Krishnappa (1938–1997), became a voice of the millions of the oppressed in the state. Krishnappa successfully mobilised and brought together the otherwise dispersed dalits in the state and was responsible for instilling the ideas of collective struggle and rationality among Karnataka’s dalits.
Those who were afraid to speak out were able to voice out their disagreements and protest against them. Krishnappa took the Ambedkar movement to every single household in Karnataka — so much so that the songs of Samiti were heard everyday in all dalit colonies across the state. On the Samiti’s protest calls, hundreds of youth roamed villages singing songs and mobilised the youth.
During this period, many activists who were involved in the movement became singers, poets, writers and literary figures. M K Nagappa was one of them.
Nagappa was born in Malahal, a village in Shimoga district’s Channagiri taluk (currently in Davangere) to Gauramma and Kariappa. Nagappa worked as a teacher and had an intense relationship with “Ambedkar songs”. He was locally renowned as a regular singer of these songs. He had also translated the songs sung by Gaddar in Andhra and would sing them in protests. He was one of the main singers of the Ambedkarite movement.
Reminiscing his participation in the massive dalit movement of 1978-79, which had mobilised around ten lakh dalits with several demands, Nagappa said, “I along with the poet Channanna Vaalekar sang,
Pull up the skies, you who have turned blue,
Make the black soil red, you blossomed fruits…”
He continued, “In those days, participating in a movement charged us up. We weren’t hungry, thirsty or even tired. Everyone was ready to walk or run singing covering great distances. Movements were overwhelmingly energising. Everyone’s spirits would be at their zenith. Back in those days, the Ambedkar movement meant student movement. Students who had migrated from villages to the cities and lived in hostels were the torch bearers of the movement. P Lankesh and B Krishnappa had organised a forum for progressive individuals then. Krishnappa, Lankesh, Indudhara Honnapura, Mangalore Vijay, M Jayanna and others had also organised a special camp for students at Chitradurga. Hundreds of youth and students participated in this camp that ignited the spirit of the movement. Lankesh had assigned me to sing on all the three days of the camp. It was those days at the camp, and Lankesh and Krishnappa, that shaped me up as a “people’s singer.”
When asked what kind of songs he wrote and sang, Nagappa said: “As the Dalit Sangharsha Samiti was prominently working in all villages, the problems of untouchability, temple entry, hotel entry, naked worship, devadasi system, poverty, hunger, child labour, atrocities against the opressed, Bagar Hukum movements and the like were the topics of discussion in almost every household. These problems inspired the songs. Complementing these songs was the literature produced by writers like Siddalingaiah, Devanoora Mahadeva and Jambanna Amarachinta Bholubandappa.
Song lyrics about Ambedkar like,
You are the rage of pain erupting in this land,
You are the tallest hope,
You are the first word of millions,
You are the voice heard beyond the waters and clouds…
— Used to sum up the work done by Ambedkar. In the ‘80s, I got the opportunity to see Gaddar in Karnataka and I started composing the people’s movements’ songs.”
He continued, “my songs were composed and practiced among the activists and the hungry.” “A song that stood in the stream of blood,” for example, travelled across villages and inspired several activists.”
Wherever they are and
however they are, my people
are awakened lions.
they dreamt of many worlds
my people were a storm…
— This song used to awaken many.
My songs spoke of the pain of my people. As I lived and shared their pain, my songs became very close to activists.
A song like,
We are the children of this soil,
this song is nothing but your breath,
come, let us sing,
oh my kin, come join us in this
path of revolution…
Mobilised activists for protests.”
MK Nagappa’s songs are sung even to this day across Karnataka during Ambedkar Jayanti celebrations and most protests for dalit rights.