TRIGGER WARNING: GRAPHIC LANGUAGE
ರಕ್ತಸಿಕ್ತ “ದಲಿತ ಭಾರತ”
“ಮರಾಠರ ಕಾಲದಲ್ಲಿ ಅಸ್ಪೃಶ್ಯ ಹೆಣ್ಣು ಮಕ್ಕಳ ಮೇಲೆ ವಿಪರೀತ ಅತ್ಯಾಚಾರ ಹಾಗೂ ಕೊಲೆಗಳು ನಡೆಯುತಿದ್ದವು ಅದರಂತೆ ಮುಂದೆಯು ಭಾರತದಲ್ಲಿ ಇದೇ ತರ ಶರವೇಗದಲ್ಲಿ ಈ ಅತ್ಯಾಚಾರ ಕೊಲೆಗಳು ನಡೆಯುವ ದಿನಗಳು ದೂರವಿಲ್ಲ”
— ಡಾ.ಬಿ.ಆರ್.ಅಂಬೇಡ್ಕರ್.
ಮೇಲಿನ ಈ ಸಾಲುಗಳು ಪ್ರಸ್ತುತ ಭಾರತದ ನೈಜತೆಯನ್ನು ಎತ್ತಿ ತೋರಿಸುತ್ತ ಬಾಬಸಾಹೇಬರ ಮಾತುಗಳು ಶುದ್ದಸತ್ಯವಾಗಿ ಕಂಡು ಬರುತ್ತಿದೆ,ಭಾರತ ಈಗ “ಪೇಶ್ವೆಗಳ ಭಾರತ” ” ಜಾತಿ ಭಾರತ” “ಕೋಮುಭಾರತ” “ಫ್ಯಾಸಿಸ್ಟ್ ಭಾರತ” “ಅಸ್ಪೃಶ್ಯತೆಯ ಭಾರತ” “ಅಕ್ರಮಣ ಭಾರತ” ದೌರ್ಜನ್ಯ ಭಾರತ” “ಶೋಷಕರ ಭಾರತ”ವಾಗಿ ಬದಲಾಗುತ್ತಿದೆ.
ದಲಿತರ ಮೇಲೆ ಮಹಿಳೆಯರ ಮೇಲೆ ಶೋಷಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ,ಅವಮಾನ,ಅಪಮಾನ,ನೋವು,ಶೋಷಣೆ,ಕಣ್ಣೀರನ್ನು ಮೂಲಭೂತ ಹಕ್ಕುಗಳಂತೆ ಪ್ರತಿಪಾದಿಸುತ್ತಿರುವುದು ತುಂಬ ದುರಂತದ ಸಂಗತಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಈ ದೌರ್ಜನ್ಯಗಳು ಮತ್ತೆ ಮತ್ತೆ ಮರುಕಳಿಸಿ ನಾನ ರೂಪ ಪಡೆದು ವಿವಿಧ ರೀತಿಯಲ್ಲಿ ನಡೆಯುತ್ತವೆ.ಚಿಕ್ಕ ಘಟನೆಗೆ ಹಲ್ಲೆ, ಅತ್ಯಾಚಾರ,ಕೊಲೆಗಳಾಗುತ್ತಿರುವುದು ಜಾತಿಭದ್ರೆತೆಯ ಬೇರನ್ನು ತೋರಿಸುತ್ತದೆ.
ಮೇಲ್ಜಾತಿ ಜನರು ದಲಿತರ ಮೇಲೆ ನಡೆಸುವ ದೌರ್ಜನ್ಯಗಳು ಜಾತಿ ಅಧಿಪತ್ಯವನ್ನು ಸ್ಥಾಪಿಸುವ ದೌರ್ಜನ್ಯಕೋರನಿಗೆ ಸಾಮೂಹಿಕ ಹೆಮ್ಮೆ ಉನ್ನತ ಭಾವನೆ ಉದ್ದೀಪಿಸುವ ಉದ್ದೇಶ ಹೊಂದಿದ್ದರೆ ಜಾತಿ ದೌರ್ಜನ್ಯದ ನೋವಿಗೆ ಗಾಯಗೊಂಡಿರುವ ಶೋಷಿತನನ್ನು ಅವಮಾನಿಸುವ ಅವನ ಸಮುದಾಯವನ್ನು ಹೆದರಿಸುವ ಅಪಮಾನಿಸುವ ಉದ್ದೇಶ ಹೊಂದಿರುತ್ತದೆ,
ಹಿಂದು ನಾವೆಲ್ಲಾ ಒಂದು ಎಂದು ಹೇಳುವವರು ಈ ಸಿದ್ದಾಂತದಿಂದಲೆ ಅಧಿಕಾರ ಅನುಭವಿಸುತ್ತಿರುವವರು ದಲಿತ ದೌರ್ಜನ್ಯದ ವಿರುದ್ದ ಚಾಕರವೆತ್ತದೆ ಇವುಗಳಿಗೆ ಪುಷ್ಟಿಕೊಡುತ್ತಿರುವುದು ಮನನುವಾದದ ಮೂಲಭೂತವಾಗಿದೆ.ಇಂದು ಭಾರತದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಸಾಲುಸಾಲುಗಳಾಗಿ ನಡೆಯುತ್ತವೆ ಇಂತಹ ದಲಿತರ ನೋವಿನ ನಡುವೆ ಇರುವ,ದಲಿತರ ದೌರ್ಜನ್ಯಗಳನ್ನು ನೋಡಿ ಅನುಭವಿಸುತ್ತಿರುವ ನನಗೆ ಈ ದೌರ್ಜನ್ಯಗಳನ್ನು ಕುರಿತು ಬರೆಯುವ ತವಕದಿಂದಲೆ ನಾನು ಬರೆಯುತಿದ್ದೇನೆ,
ಹಿಂದುತ್ವದ ಅಜೇಂಡದಿಂದ ಅಧಿಕಾರಕ್ಕೆ ಬಂದಿರುವ ವ್ಯವಸ್ಥೆ ಪೇಶ್ವೆಗಳ ದೌರ್ಜನ್ಯವನ್ನು ಮರುಸ್ಥಾಪಿಸುತ್ತಿದೆ, ಸುಡುವ ಜಾತಿವಾದ,ಕೋಮುವಾದ,ಮನುವಾದದಿಂದ ಭಾರತವನ್ನು ಎಲ್ಲಿಗೆ ಕೊಂಡೋಗಿ ನಿಲ್ಲಿಸಿತು ಎಂಬುದನ್ನು ಇವತ್ತಿನ ದಲಿತರ ದೌರ್ಜನ್ಯ ಪ್ರಕರಣಗಳೆ ಸಾಕ್ಷಿಯಾಗಿ ಹೇಳುತ್ತಿವೆ.
ಪೆಬ್ರವರಿ ತಿಂಗಳು 2021ರಂದು
ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ನರಗುಂದದಲ್ಲಿ ದಲಿತ ವಿದ್ಯಾರ್ಥಿ ತಾನು ಮನೆಯಿಂದ ಪಾಠಿಚೀಲ ಹೆಗಲಿಗೆ ಹಾಕಿಕೊಂಡು ನವಕನಸ್ಸುಗಳನ್ನು ಹೊತ್ತು ಶಾಲೆಗೆ ನಡೆದುಕೊಂಡು ಹೋಗುತಿದ್ದಾಗ ಅಲ್ಲಿನ ಮೇಲ್ಜಾತಿ ಕಾಮುಕ ಕಿಡಿಗೇಡಿಗಳು ಅಪಹರಿಸಿ ದೂರದಲ್ಲಿರುವ ರಾಮದುರ್ಗಕ್ಕೆ ಹೋಯ್ದು ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಮೈತುಂಬ ಆ್ಯಸಿಡ್ ಹಾಕಿ ಸುಟ್ಟು ಕೊಲೆ ಮಾಡಿದ್ದಾರೆ ಇದೊಂದು ಕ್ರೌರ್ಯದಾಯಕವಲ್ಲದೆ ಮತ್ತೇನು ಅಲ್ಲ, ಈ ಸಂಬಂಧವಾಗಿ ಸದರಿ ಪ್ರಕರಣ ನರಗುಂದ ಪೋಲೀಸ್ ಠಾಣೆಯಲ್ಲಿ ದಾಖಲಾದರು ತುರ್ತು ಪರಿಹಾರಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ,ಬಾಗಲಕೋಟ ಜಿಲ್ಲೆಯಲ್ಲಿ ಇದೆ ಪೆಬ್ರವರಿ 2021 ರಂದು ಮತ್ತೊಬ್ಬ ದಲಿತ ಯುವತಿಯನ್ನು ಮೇಲ್ಜಾತಿ ಯುವಕರು ಹಣ್ಣಿನಂತೆ ಹಂಚಿಕೊಂಡು ಸಾಮೂಹಿಕವಾಗಿ ರೇಪ್ ಮಾಡಿ ಘಟಪ್ರಭಾ ನದಿಯ “ಕಲಾದಗಿ” ಸೇತುವೆ ಬಳಿ ಶವವನ್ನು ಎಸೆದು ಹೋಗಿರುತ್ತಾರೆ,ಕಲಾದಗಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
2021ರ ಡಿಸೆಂಬರ್ ತಿಂಗಳಲ್ಲಿ ದಾವಣಗೆರೆ ಜಿಲ್ಲೆಯ ಸಂತೇಬೆನ್ನೂರಿನ ಸರ್ಕಾರಿ ಲೇಡಿಸ್ ಹಾಸ್ಟಲ್ ನಲ್ಲಿ ದಲಿತಬಾಲಕಿ ಒಂಬತ್ತನೆ ತರಗತಿ ಒದುತ್ತಿರುತ್ತಾಳೆ ತಾಯಿ ದೇವದಾಸಿಯಾಗಿದ್ದು ತಂದೆಯ ಪ್ರೀತಿಯಿಲ್ಲದೆ ತುಂಬಾ ಬಡತನದಲ್ಲಿ ಜೀವಿಸುವ ಬಾಲಕಿಗೆ ಮೇಲ್ಜಾತಿಯ ಪ್ರಸನ್ನ ಎಂಬ ವ್ಯಕ್ತಿ ಈಗಾಗಲೆ ಮದುವೆಯಾಗಿ ಇಬ್ಬರು ಮಕ್ಕಳನ್ನು ಇದ್ದು ಪವಿತ್ರ ಎಂಬ ಹೆಂಡತಿಯಿರುತ್ತಾಳೆ,ಇದೆಲ್ಲವನ್ನು ಮರೆತು ಬಡವಿಯಾದ ಅಂಜಲಿಗೆ ಇಲ್ಲಸಲ್ಲದ ಆಸೆ ಹುಟ್ಟಿಸಿ ಸರಣಿಯಾಗಿ ಅತ್ಯಾಚಾರ ಮಾಡಿ ಹದಿನೈದು ವರ್ಷದ ಹುಡುಗಿನ ಗರ್ಭಿಣಿ ಮಾಡಿದ,ಮೂರು ತಂಗಳಿನ ಅಂಜಲಿ ನಡೆದ ವಿಚಾರವನ್ನು ತಾಯಿಗೆ ತಳಿಸುತ್ತಾಳೆ ಆಗ ತಾಯಿ ಸಂತೇಬೆನ್ನೂರು ಪೋಲಿಸ್ ಠಾಣೆಗೆ ದೂರು ಕೊಟ್ಟರು ಸ್ಥಳೀಯ ರಾಜಕಾರಣಿಗಳ ಹಾಗೂ ಜಾತಿವಾದಿಗಳ ಮೂಲಕ ರಾಜಿ ಪಂಚಾಯಿತಿ ಮಾಡಿ ಅವಳು ಕೀಳು ಜಾತಿಯವಳಾಗಿದ್ದು ಅವಳನ್ನು ಮನೆಗೆ ಕರೆದುಕೊಳ್ಳಲು ಬರುವುದಿಲ್ಲ ಎಂದು ಬೇರೆ ಬಾಡಿಗೆ ಮನೆ ಮಾಡಿ ಇಡಬೇಕು ಹಾಗೂ ಹತ್ತುಸಾವಿರ ದಂಡ ಕೊಟ್ಟು ಕೈ ತೊಳೆದುಕೊಂಡರು,ದೇವದಾಸಿಯ ಮಗಳು ಇತ್ತ ಅವನಿಗೆ ಹೆಂಡತಿಯಾಗದೆ .ಅತ್ತ ವಿದ್ಯಾರ್ಥಿಯಾಗಿ ಶಾಲೆಗೆ ಹೋಗದೆ ಬಾಲ್ಯದಲ್ಲಿ ಬಸುರಿಯಾಗಿ ಒಂಟಿತನದಿಂದ ಜೀವಿಸುವ ಇವಳಿಗೆ ಜಾತಿವಾದ ಪೋಲಿಸ್ ವಾದ ಮೋಸ ಮಾಡುತ್ತದೆ.ಆಕೆಯನ್ನು ನಾನು ವಿಚಾರಿಸಿದಾಗ ಅವಳಿಗೆ ಮುತ್ತುಕಟ್ಟಿಸಿ ತಾಯಿಯಂತೆ ಆ ದೇವರಿಗೆ ಮುತ್ತುಕಟ್ಟಿಸಿಕೊಂಡು ದೇವದಾಸಿಯಾಗುತ್ತೇನೆ ಎಂದು ಕಣ್ಣೀರು ಹಾಕುತ್ತಾಳೆ ,ಅವಳನ್ನು ಬದಲಾಯಿಸಲು ಹಾಗೂ ಪುನರ್ ದೂರು ಕೊಡಲು ಹೇಳಿದರು ಆಕೆ ಒಪ್ಪದೆ ದಿಟ್ಟನಿರ್ಧಾರ ಮಾಡಿಕೊಂಡಿದ್ದಾಳೆ.ಬರುವ ಯುಗಾದಿ ಹಬ್ಬದಲ್ಲಿ ಉಚ್ಚಂಗಿ ಯಲ್ಲಮ್ಮನ ಮುಂದೆ ಮುತ್ತುಕಟ್ಟಿಸಿಕೊಳ್ಳಲು ಸಿದ್ದವಾಗಿದ್ದಾಳೆ.
“ಒದುವ,ಹಾಡುವ, ಕುಣಿಯುವ,ಮಕ್ಕಳೊಂದಿಗೆ ಆಟ ಆಡುವ ವಯಸ್ಸಿನಲ್ಲಿ ಪ್ರಸನ್ನನೆಂಬ ಮೇಲ್ಜಾತಿ ಕಾಮದ ಕ್ರಿಮಿ ಅಕ್ಷರವಾಗುವ ಅವಳ ಬದುಕನ್ನು ವೇಶ್ಯೆಯಾಗಿ ಮಾಡಿದ್ದು ಚಾರಿತ್ರಿಕ ದುರಂತವಾಗಿದೆ,
ಚನ್ನಗಿರಿ ತಾಲೂಕಿನ ಕುಳೆನೂರಿನಲ್ಲಿ ಮಾರ್ಚ್2021 ರಂದು ಮೇಲ್ಜಾತಿಗೆ ಸೇರಿದ ಕೃಷ್ಣಮೂರ್ತಿ ಟಿವಿ ಡಿಶ್ ವ್ಯವಸ್ಥಾಪಕನಾಗಿದ್ದು ದಲಿತ ಕೇರಿಗೆ ಹೋಗಿ ದಲಿತ ಯುವಕನನ್ನು ಈ ತಿಂಗಳ ಡಿಶ್ ಬಿಲ್ಲನ್ನು ಕೇಳಿದ್ದಾನೆ,ಕೂಲಿ ಮಾಡಿ ಜೀವಿಸುವ ಅರುಣ್ ಎರಡು ದಿನ ಸಮಯ ಕೊಡಿ ಅಣ್ಣ ನಾನು ಕೂಲಿ ಮಾಡಿ ತಂದುಕೊಡುವೆ ಎಂದಿದ್ದಾನೆ ಕೇವಲ ಇಷ್ಟೆ ಮಾತಿಗೆ ಬೆಂಕಿಯಂತೆ ಸಿಡಿದ ಮೇಲ್ಜಾತಿಯ ಕೃಷ್ಣಮೂರ್ತಿ ತನ್ನ ಸಹಚರ ಗೂಂಡಗಳಾದ ಈಶ್ವರ್.ರಾಜಪ್ಪ ಮುಂತಾದವರನ್ನು ಕರೆಸಿ ಮನೆಯಿಂದ ಕೊರಳುಪಟ್ಟಿ ಇಡಿದು ಹಿಗ್ಗಾಮುಗ್ಗಾ ಥಳಿಸಿ ಊರ ಮಧ್ಯಕರೆದು ಅಲ್ಲಿ ಬೀದಿದೀಪಗಳನ್ನು ಆಫ್ ಮಾಡಿ ಲೈಟಿನಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ,ಈ ವಿಷಯ ದಲಿತ ಸಂಘಟನೆಗಳಿಗೆ ತಿಳಿದು ತಕ್ಷಣವೆ ಪೋಲಿಸ್ ಇಲಾಖೆ ಗಮನಕ್ಕೆ ತಂದು ಘಟನೆ ನಡೆದ ಸ್ಥಳಕ್ಕೆ ಕಳಿಸಿದ್ದಾರೆ,ಆಗ ಆರಕ್ಷಕರು ಬಂದು ರಕ್ಷಣೆ ಕೊಟ್ಟಿದ್ದಾರೆ,ಪೋಲಿಸ್ ಬರದೆ ಇದ್ದಿದ್ದರೆ ಸತ್ತೆ ಹೋಗುತಿದ್ದ ಎಂದು ಪ್ರತ್ಯಕ್ಷ ಸಾಕ್ಷಿ ದಲಿತ ಮುಖಂಡ ನಿಲಪ್ಪ ಕಣ್ಣೀರು ಒರೆಸಿಕೊಳ್ಳುತ್ತಾರೆ,ನಂತರ ಮಾರನೆ ದಿನ ಅಟ್ರಾಸಿಟಿ ದೂರು ಕೊಟ್ಟರು.ಆದರೆ ಇಂದಿಗು ಅವರನ್ನು ಬಂದಿಸಿಲ್ಲ ಹಾಗೂ ಯಾವ ಶಿಕ್ಷೆಯನ್ನು ಕೊಟ್ಟಿಲ್ಲ ಇದಲ್ಲವೆ ಜಾತಿ ಭಾರತ, ಜಾತಿರಾಜಕಾರಣಿಗಳ ಚೇಲಾಗಳಾಗಿರುವ ಖಾದಿಗಳು ವ್ಯವಸ್ಥಿತವಾಗಿ ದಲಿತರ ದೌರ್ಜನ್ಯಗಳನ್ನು ಮುಚ್ಚಿಹಾಕಿದರು,
ದಾವಣಗೆರೆ ಜಿಲ್ಲೆಯ ಸಿದ್ದನಮಠದಲ್ಲಿ ಅಡಿಕೆ ಸುಲಿಯುವ ಕೂಲಿ ಕೆಲಸಕ್ಕೆ ಹೋಗುತಿದ್ದ ಕುಡಿವ ಗಂಡನನ್ನು ಎರಡು ಮಕ್ಕಳನ್ನು ಕಟ್ಟಿಕೊಂಡು ಇಡೀ ಸಂಸಾರಕ್ಕೆ ಇವಳೆ ಆಧಾರವಾಗಿದ್ದಳು,2021 ರ ಜನವರಿ ತಿಂಗಳಲ್ಲಿ ಒಂದು ದಿನ ರಾತ್ರಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮೇಲ್ಜಾತಿಯ ನಾಗರಾಜ ಎಂಬ ಕಾಮುಕ ಯುವಕ ಬಾಗಿಲು ಮುಚ್ಚಿ ಎರಡು ಕೈಗಳನ್ನು ಬಿಗಿಯಾಗಿ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ತುಂಬಾ ಬಲವಂತವಾಗಿ ಸತತ ಮೂರುಗಂಟೆಯವರೆಗೆ ಅತ್ಯಾಚಾರ ಮಾಡಿ ವಿಕೃತ ಮೆರೆದನು,ಅಲ್ಲಿನ ಕೆಲವು ಅಕ್ಷರಸ್ತ ದಲಿತ ಯುವಕರು ಆಸ್ಪತ್ರೆಗೆ ಕರೆದೋಗಿ ಚಿಕಿತ್ಸೆ ಕೊಡಿಸಿ ಅಲ್ಲಿಂದ ಪೋಲೀಸ್ ಠಾಣೆಗೆ ಕರೆದು ದೂರು ಕೊಡುತ್ತಾರೆ,ದೂರು ಸ್ವೀಕರಿಸಿದ ಪೋಲಿಸ್ ಅವನ್ನು ಹಿಡಿದು ರೇಫ್ ಕೇಸ್ ಹಾಕಿ ಜೈಲಿಗೆ ಕಳಿಸೋದು ಬಿಟ್ಟು ಅತ್ಯಾಚಾರವೆ ಆಗಿಲ್ಲವೆಂಬಂತೆ ಸಣ್ಣ ಕೇಸ್ ಹಾಕಿ ಇಡೀ ರೇಫ್ ಕೇಸನ್ನೆ ಮುಚ್ಚಿಹಾಕಿದರು,ನಂತರದ ದಲಿತ ಸಂಘಟನೆಗಳ ಹೋರಾಟದಿಂದ ಜೈಲಿಗೆ ಕಳಿಸಿದರು ಆದರೆ ಕೆಲವೆ ದಿನಗಳಲ್ಲಿ ಜೈಲಿನಿಂದ ಹೊರ ಬಂದ ನಾಗಾರಜ್ ರಾಜರೋಷವಾಗಿ ಅಡ್ಡಾಡುತಿದ್ದಾನೆ,ಇಲ್ಲಿ ತನ್ನ ಮಾನ ಮರ್ಯಾದೆ ಕಳೆದುಕೊಂಡ ಆ ನೊಂದ ಮಹಿಳೆಗೆ ನ್ಯಾಯ ಸಿಗಲಿಲ್ಲ,ಸಮಾಜದ ಜನರ ನೋಟಕ್ಕೆ ಹಾಗೂ ಮಾತನಾಡುವ ನಿಂದನೆಯ ಮಾತುಗಳನ್ನು ಕೇಳದೆ ನೊಂದು ವಿಷ ಕುಡಿದು ಆತ್ಮಹತ್ಯಗೆ ಯತ್ನಿಸಿ ಕೆಲವೆ ಸಮಯದಿಂದ ಮರಣದಿಂದ ಪಾರಾದಳು,ಈಕೆಯನ್ನು ಇಂದಿಗೂ ಇಡಿ ಸಂಬಂಧಿಕರು ಯಾರು ಮಾತನಾಡಿಸದೆ ಹಾಗೂ ಗಂಡ ಮಕ್ಕಳು ಜೊತೆಯಿಲ್ಲದೆ ಒಂಟಿಯಾಗಿ ಬದುಕುತಿದ್ದಾಳೆ,
ನಲ್ಕುದುರೆ ಎಂಬ ಗ್ರಾಮದಲ್ಲಿ ದಲಿತ ಮಹಿಳೆ(56) ಗಂಡನಿಲ್ಲದ ವಿಧವೆ ಇವಳು ಇಂದಿರಾಗಾಂಧಿ ಕೊಟ್ಟಿದ್ದ ಉಳುವವನೆ ಭೂ ಒಡೆಯ ಯೋಜನೆಯಲ್ಲಿ ಬಂದ ಎರಡು ಎಕರೆ ಹೊಲದಲ್ಲಿ ಕೂಲಿನಾಲಿ ಮಾಡಿದ್ದ ಹಣದಲ್ಲಿ ಬೋರು ಕೊರೆಸಿ ಅಡಿಕೆ ಹಾಗೂ ತೆಂಗಿನ ತೋಟ ಮಾಡಿದ್ದಳು,ತುಂಬಾ ಫಲವತ್ತತೆಯಿಂದ ಬೆಳೆದ ತೋಟದ ಅಕ್ಕಪಕ್ಕ ಮೇಲ್ಜಾತಿಯರ ತೋಟಗಳಿರುತ್ತವೆ ಎಲ್ಲರ ತೋಟಗಳಿಗಿಂತ ಉಲುಸಾಗಿ ಬೆಳೆದು ಹೆಚ್ಚು ಫಲ ಕೊಡುವ ತೋಟದ ಮೇಲೆ ಮೇಲ್ಜಾತಿಯ ಮುಖಂಡರ ಕಣ್ಣು ಬೀಳುತ್ತೆ, ಹೇಗಾದರು ಮಾಡಿ ಈ ತೋಟವನ್ನು ಪಡೆಯಬೇಕೆಂಬ ದುರಾಸೆಯಿಂದ ಈ ತೋಟವನ್ನು ನಾವು ಕೊಂಡುಕೊಳ್ಳುತ್ತೇವೆ ಮಾರು ಎಂದು ಕೇಳುತ್ತಾರೆ ಆದರೆ ಮಾರಲ್ಲ ಎಂದು ಉತ್ತರಿಸುತ್ತಾಳೆ,ನಂತರ ಅವರು ದಿನೆದಿನೆ ಏನಾದರೊಂದು ಜಗಳ ತೆಗೆಯುತಿದ್ದರು ಇದ್ಯಾವುದಕ್ಕು ಅಜ್ಜಿ ಬಗ್ಗುತ್ತಿರಲಿಲ್ಲ, ಹೀಗೆ ಅಷ್ಟು ಫಲ ಕೊಡುವ ಮರಗಳು ಒಂದೊಂದಾಗಿಯೆ ಒಣಗುತ್ತ ಹೋಗುತಿದ್ದವು,ಆಗ ಒಂದು ಮರದ ಬುಡದ ಮಣ್ಣನ್ನು ಬಗೆದು ನೋಡಿದರೆ ಆ ಮೇಲ್ಜಾತಿಯ ಕ್ರೂರಿಗಳು ಇಡಿ ತೋಟಕ್ಕೆ ತೋಟವೆ ಒಣಗಿ ಹೋಗುವ ಔಷದಿ ಗೊಬ್ಬರ ಸಿಂಪಡಿಸಿದ್ದರು,ಇದನ್ನು ನೋಡಿದ ಅಜ್ಜಿ ತಾನು ದುಡಿದು ಬೆಳೆಸಿದ ಮರಗಳು ತನ್ನ ಕಣ್ಣೆದುರಿಗೆ ಒಣಗಿ ಹೋಗುವುದನ್ನು ನೋಡಿ ಗೋಳಾಡಿದಳು,ಕಣ್ಣೀರಾಕಿದಳು ದುರಂತ ಸಮಯ ಮೀರಿತ್ತು,ಪೋಲಿಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ಆಯ್ತು ಮೇಲ್ಜಾತಿಯ ಕ್ರಿಮಿಗಳು ಜೈಲಿಗು ಹೋಗಿ ಬಂದರು,ಸರ್ಕಾರದ ಸಣ್ಣ ಪರಿಹಾರವು ಬಂತು ಆದರೆ ಬೆವರು ಸುರಿಸಿ ಬೆಳೆದ ತೋಟ ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ,ದಲಿತರು ಆಸ್ತಿ ಮಾಡಬಾರದು ಎಂದು ಹೇಳಿದ ಮನುಸ್ಮೃತಿಯಂತೆ ಇಲ್ಲಿ ಇಡಿ ತೋಟವನ್ನೆ ಮನುವಾದಿಗಳು ಸರ್ವನಾಶ ಮಾಡಿದರು,
ಇನ್ನು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಬಸಾಪುರ ಗ್ರಾಮವು ದಲಿತರು ಮತ್ತು ಲಿಂಗಾಯ್ತರು ಮಾತ್ರ ಇರುವ 209 ಮನೆಗಳಿರುವ ಕುಗ್ರಾಮ ,2021 ಮಾರ್ಚ್ ತಿಂಗಳಲ್ಲಿ ಊರ ದೇವಿಯ ಜಾತ್ರೆ ನಡೆಯುತ್ತದೆ ದಲಿತರೆ ಅಲ್ಲಿ ಕಸ ಗುಡಿಸುವ,ತಮಟೆ ಬಡಿಯುವ ಹೀಗೆ ಸಾಂಪ್ರದಾಯಿಕವಾಗಿ ಮಾಡುವ ಎಲ್ಲಾ ಕಾಯಕಗಳನ್ನು ಮಾಡಿರುತ್ತಾರೆ,ಜಾತ್ರೆಯ ರಾತ್ರಿ ದೇವಿಯನ್ನು ಪಲಕ್ಕಿಯಲ್ಲಿ ಕೂರಿಸಿ ತಮಟೆ ಬಡಿತ ,ವೀರಗಾಸೆ,ಹೀಗೆ ಜಾನಪದ ಪರಂಪರೆಯಲ್ಲಿ ಇಂದು ಆಧುನಿಕ ಕಾಲದ ಡೀಜೆ ಹಾಡುಗಳ ಯುವಕರ ನೃತ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ,ಅಲ್ಲಿ ಲಿಂಗಾಯತ ಯುವಕರು ಹಾಗೂ ದಲಿತ ಯುವಕರು ಇಬ್ಬರು ಸೇರಿ ಕುಣಿಯುತ್ತಾ ಬರುತ್ತಾರೆ ಆದರೆ ಅಲ್ಲಿ ಲಿಂಗಾಯತ ಹಿರಿಯ ಮುಖಂಡರು ಸುದೀಪ್ ಪಾಂಡು ಎಂಬ ದಲಿತ ಯುವಕನ್ನು ತಡೆದು ಮಾದಿಗರು(ದಲಿತರು) ಸೈಡಿಗೆ ಹೀಗಿ ಕುಣಿಯಿರಿ ನಮ್ಮ ಸರಿಸಮಾನವಾಗಿ ಕುಣಿಯಬೇಡಿ ಎಂದು ಗದರುತ್ತಾರೆ,ಆಗ ಪಾಂಡು ತನ್ನ ಅಣ್ಣಂದಿರಾದ ಸುದೀಪ್,ರವಿಸೂರ್ಯ ಮುಂತಾದ ಅಣ್ಣರೊಂದಿಗೆ ನಡೆದ ಸುದ್ದಿಯನ್ನು ಮುಟ್ಟಿಸತಾನೆ.ಕೋಪಗೊಂಡ ಈ ಯುವಕರು ಅಂಬೇಡ್ಕರ್ ಅವರನ್ನು ಹಾಗೂ ಸಂವಿಧಾನವನ್ನು ಒದಿಕೊಂಡಿದ್ದ ಸಿಟಿಗಳಲ್ಲಿ ಉನ್ನತ ಶಿಕ್ಷಣ ಪಡೆದ ಬಂದಿದ್ದ ಕೆಲವು ದಲಿತ ಯುವಕರ ಪಡೆ ನಾವು ಮನುಷ್ಯರು ಎಲ್ಲಾರು ದೇವರ ದೃಷ್ಟಿಯಿಂದ ಸಮಾನರು ಆಗಾಗ್ಗೆ ಎಲ್ಲಾ ಒಗ್ಗಟ್ಟಾಗಿ ಕುಣಿಯೋಣವೆಂದು ಪಟ್ಟು ಹಿಡಿಯುತ್ತಾರೆ,ಇಷ್ಟೆ ಕಾದು ಕುಳಿತಿದ್ದ ಆ ಜಾತಿವಾದಿ ಗೂಂಡಗಳು ಇವರ ಮೇಲೆ ದಂಡೆತ್ತಿ ಬಂದು ಮಾರಣಾಂತಿಕ ಹಲ್ಲೆ ಮಾಡಿ ಕಾಲಲ್ಲಿ ಹಿಡೆದು ಬಟ್ಟೆಯನ್ನೆಲ್ಲಾ ಕಿತ್ತು ಕಳಿಸುತ್ತಾರೆ,ಮದ್ಯ ರಾತ್ರಿ ಹನ್ನೆರಡರ ಸಮಯದಲ್ಲಿ ದಲಿತ ಹೋರಾಟಗಾರರ ಸಹಾಯ ಪಡೆದು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೊಳಲ್ಕೆರೆ ಪೋಲಿಸ್ ಠಾಣೆಗೆ ದೂರು ಕೊಡುತ್ತಾರೆ,ಆದರೆ ಅಲ್ಲಿನ ಕೆಲವು ಚಮಚಾ ದಲಿತ ರಾಜಕಾರಣಿಗಳು ಇದನ್ನು ಕೇಸು ಆಗದಂತೆ ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಾರೆ,ಇಂದಿಗು ನ್ಯಾಯ ಸಿಗದ ಅವರು ಜಾತಿವಾದಿಗಳ ದೌರ್ಜನ್ಯಗಳ ವಿರುದ್ದ ಹಲ್ಲಹಲ್ಲು ಕಡಿದು ತಮ್ಮ ಸಿಟ್ಟನ್ನ ತಾವೆ ತಮ್ಮ ಮೇಲೆ ಹಾಕಿಕೊಂಡು ಬದುಕುತಿದ್ದಾರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬ ಮಾತು ಈ ಬಸಾಪುರ ದಲಿತ ಯುವಕರ ಬದುಕಿನಲ್ಲಿ ನಿಜವೆನಿಸುತ್ತದೆ,
ಇದೆ ಊರಿನ ಪಕ್ಕ ನುಲೆನೂರಿನಲ್ಲಿ ಪರಮೇಶಿ ಎಂಬ ದಲಿತ ಮೇಲ್ಜಾತಿಯ ಅಂಗಡಿ ಮುಂದಿನ ಕಟ್ಟೆಯ ಮೇಲೆ ಕುಳಿತಿದ್ದಕ್ಕೆ ಈ ಜಾಗದಲ್ಲಿ ನೀನು ಕೂರಬೇಡ ನೀನೊಬ್ಬ ಕೀಳುಮುಂಡೆ ಎಂದು ಅಲ್ಲಿನ ಮೇಲ್ಜಾತಿಯವರು ಪರಮೇಶಿಯನ್ನು ಹಾಸಿಗೆ ಹಿಡಿಯುವಂತೆ ಹೊಡೆದಿದ್ದರು ದೂರು ದಾಖಲಾದರು ಅವರಿಗೆ ಶಿಕ್ಷೆಯಾಗದೆ ಇದ್ದಿದ್ದು ಜಾತಿಮನಸ್ಸಿನ ಕರಾಳತೆಯಾಗಿದೆ.
ಮನುಷ್ಯನ ಜಾತಿಗ್ರಸ್ತ ಮನಸ್ಸು ಅಸ್ಪೃಶ್ಯರ ವಿರುದ್ಧ ಅಮಾನವೀಯನಾಗುವ ಆತ್ಯಂತಿಕ ಹಂತ ಇದೇ ಇರಬಹುದು. ಸತ್ತ ಮಗುವನ್ನು ಸ್ಮಶಾನದ ಗುಂಡಿಯಿಂದ ಹೊರ ತೆಗೆಸಿ ಹೆತ್ತವರನ್ನು ಸ್ಮಶಾನದಿಂದ ಆಚೆಗೆ ಓಡಿಸಿದ ಅಮಾನವೀಯ ಘಟನೆ ಇದು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿ ಗ್ರಾಮದ ದಲಿತ ಕೂಲಿಕಾರರ ಕುಟುಂಬವೊಂದರ ಹೃದಯ ವಿದ್ರಾವಕವೂ ಕರುಣಾಜನಕವೂ ಆದ ಘಟನೆ ಇದು. ಕಲ್ಲು ಕ್ವಾರಿಯಲ್ಲಿ ಜಿಲೆಟಿನ್ ಕಡ್ಡಿಗಳ ಸ್ಫೋಟದಿಂದ ಹತ್ತಿರದ ಮನೆಗೋಡೆಗಳು ಮಾತ್ರ ಬಿರುಕು ಬಿಟ್ಟು ಹಾಳಾಗುವುದಲ್ಲದೆ ಮನುಷ್ಯನೂ ಸೇರಿದಂತೆ ಸುತ್ತಲ ಜೀವಜಾಲಕ್ಕೂ ಪ್ರಾಣಾಂತಿಕವಾಗಿವೆ.
ಅತ್ಯಂತ ಕಡು ಬಡತನದ ದಲಿತ ಕೂಲಿಕಾರ್ಮಿಕರ ಕುಟುಂಬಕ್ಕೆ ಸೇರಿದ ಎಳೆ ಮಗುವೊಂದು ಸತ್ತಾಗ, ಮೃತ ದೆಹವನ್ನೇ ಬಲವಂತವಾಗಿ ಸ್ಮಶಾನದ ಗುಂಡಿಯಿಂದ ಹೊರಗೆ ತೆಗಿಸಿ ದೌರ್ಜನ್ಯ ಎಸಗಿದ ಮೇಲ್ಜಾತಿಯ ಕಿರಾತಕನ ವರ್ತನೆಯ ಆ ವಿಡಿಯೋವನ್ನು ಸಂಪೂರ್ಣವಾಗಿ ನೋಡಿರಿ. ಮಾನವೀಯತೆಯನ್ನು ಮರೆತ ಇಂತಹ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ನೊಂದ ದಲಿತ ಕೂಲಿಕಾರ್ಮಿಕರ ಕುಟುಂಬಕ್ಕೆ ನ್ಯಾಯ ಸಿಕ್ಕಬೇಕು.
ಕೋಲಾರದಲ್ಲಿ ಜಮೀನು ವಿಚಾರವಾಗಿ ಅಲ್ಲಿನ ಮೇಲ್ಜಾತಿಯವರು ದಲಿತ ಅಣ್ಣ ತಮ್ಮಂದಿರನ್ನು ಹಾಡುಹಗಲಿನಲ್ಲೆ ಕತ್ತರಿಸಿ ಹಾಕುತ್ತಾರೆ,ಜಮಖಂಡಿಯಲ್ಲಿ ದಲಿತ ಬಾಲಕಿಯನ್ನು ಅಲ್ಲಿನ ಲಿಂಗಾಯ್ತ ಜಾತಿಗೆ ಸೇರಿದ ಯುವಕ ಅತ್ಯಾಚಾರ ಮಾಡಿ ಕೊಲೆಮಾಡುತ್ತಾನೆ,ಚನ್ನಗಿರಿ ತಾಲ್ಲೂಕಿನ ಚಿಕ್ಕಗಂಗೂರಿನಲ್ಲಿ ಕೂಲಿ ಮಾಡಿದ ಹಣ ಕೇಳಿದ್ದಕ್ಕೆ ಹೊಡೆದು ಕೊಲೆಗೈಯುತ್ತಾರೆ,
2021 ರ ಆಕ್ಟೋಬರ್ ತಿಂಗಳಲ್ಲಿ ಉತ್ತರ ಪ್ರದೇಶದ ಬರಾಬಂಕಿ ಗ್ರಾಮದಲ್ಲಿ 18 ವರ್ಷದ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದು ಸದರಿ ಪ್ರಕರಣವು ಸಾತ್ರಿಕ್ ಠಾಣೆಯಲ್ಲಿ ದಾಖಲಾಗಿದೆ,
ಮಾರ್ಚ್ 2021 ರಂದು ಉತ್ತರ ಪ್ರದೇಶ ರಾಜ್ಯದ ಆಲಿಘರ್ ಗ್ರಾಮದಲ್ಲಿ ಒಬ್ಬ ದಲಿತ ಬಾಲಕಿಯನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಕೊಲೆಗೈದು ಸಾಯಿಸುತ್ತಾರೆ,
ಯುಪಿಯ ಪತೇಪುರದ ಲಿಲೌಲಿ ಹಳ್ಳಿಯಲ್ಲಿ ಇಪ್ಪತ್ತು ವರ್ಷದ ದಲಿತ ಯುವತಿಯೊಬ್ಬಳು ಸಂಜೆ ಸಮಯದಲ್ಲಿ ಬಹಿರ್ದೇಸೆಗೆ ಹೋದಾಗ ಅವಾಸ್ ಯಾದವ್ ಗುಡ್ದು ಯಾದವ್ ಇಬ್ಬರು ಸೇರಿ ಅಪಹರಿಸಿ ಅವಳನ್ನು ಅತ್ಯಾಚಾರ ಮಾಡಿ ಕೊಲೆಮಾಡಿದರು ಈ ಪ್ರಕರಣವು ಪತೇಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ,
ಯುಪಿಯ ಕಾಕುರೆ ಗ್ರಾಮದಲ್ಲಿ ಹದಿನಾಲ್ಕು ವರ್ಷದ ಅಪ್ರಾಪ್ತ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡುತ್ತಾರೆ,
ಯುಪಿಯ ಲಖೌನದ ಹತ್ತಿರದಲ್ಲಿರುವ ಬಲರಾಮಪುರ ಗ್ರಾಮದ ಅಕ್ಟೋಬರ್2020 ರಂದು ಪ್ರೌಡ ಶಾಲೆ ಮುಗಿಸಿ ಕಾಲೇಜಿಗೆ ದಾಖಲಾಗಲು ಹೋಗುತಿದ್ದ ದಲಿತ ಹುಡುಗಿಯನ್ನು ಎಳೆದು ಅಪಹರಿಸಿ ಮೇಲ್ಜಾತಿಯ ಕಾಮುಕರು ಆ ಎಳೆಯ ಹುಡುಗಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಗುಪ್ತಾಂಗಗಳಿಗೆ ಕಟ್ಟಿಗೆಯಿಂದ ಹೊಡೆದು ಇಡೀ ದೇಹದ ತುಂಬಾ ಕ್ರೌರ್ಯ ಮರೆದು ಆಟೋರಿಕ್ಷದಲ್ಲಿ ಅವಳ ಮನೆಯ ಹೊರಗೆ ಬಿಸಾಡಿ ಹೋಗುತ್ತಾರೆ,ಚಿಕಿತ್ಸೆಗಾಗಿ ಲಖನೌ ಗೆ ತೆರಳುವ ಮಾರ್ಗದಲ್ಲಿ ನಡೆದ ವಿಚಾರ ಹೇಳಿ ಸತ್ತು ಹೋಗುತ್ತಾಳೆ,ಕಾಲೇಜಿಗೆ ಹೆಜ್ಜೆಯಿಡು ದಲಿತ ಶೈಕ್ಷಣಿಕ ಬಾಲಕಿಯು ಮರಣ ಹೊಂದುತ್ತಾಳೆ,
ಮಧ್ಯ ಪ್ರದೇಶದ ಬಾವೇದಿ ಗ್ರಾಮದಲ್ಲಿ ಇಬ್ಬರು ದಲಿತ ಬಾಲಕಿಯರು ಬಹಿರ್ದೆಸೆಗೆ ತೆರಳಿದಾಗ ಅಲ್ಲಿನ ಜಾತಿ ಕಾಮುಕರು ಅತ್ಯಚಾರ ಮಾಡಿ ಕೊಲೆ ಮಾಡಿ ವಿಕೃತ ಮೆರೆಯುತ್ತಾರೆ, ಹೀಗೆ ಹೇಳುತ್ತಾ ಹೋದಂತೆ ದಲಿತರ ಕೊಲೆಗಳ ಸಾಲು ಸರಣಿಗಳು ಸಿಗುತ್ತವೆ,
ಕರ್ನಾಟಕ ಪೋಲಿಸ್ ಇಲಾಖೆಯ 2020ರ ದಲಿತ ದೌರ್ಜನ್ಯಗಳ ಅಂಕಿ ಅಂಶಗಳು ಇಂತಿವೆ,2018 ರಲ್ಲಿ1.219. 2019 ರಲ್ಲಿ 1.187,2020 ರ ಆಗಸ್ಟ್ 31 ರವರೆಗೆ 899 ಪ್ರಕರಣಗಳು ದಾಖಲಾಗಿವೆ,2018 ರಿಂದ 2020 ರ ಆಗಸ್ಟ್ ವರೆಗೆ ರಾಜ್ಯದಲ್ಲಿ SC /ST ಮಹಿಳೆಯರ ಮೇಲೆ 428 ಅತ್ಯಾಚಾರ 263 ಕೊಲೆಗಳು ನಡೆದಿವೆ.ಇವು ಸರ್ಕಾರಕ್ಕೆ ದಾಖಲಾದ ಪ್ರಕರಣಗಳು ಅಷ್ಟೇ ಆದರೆ ದಿನ ನಿತ್ಯ ನಡೆಯುವ ಸಾವಿರ ಲಕ್ಷ ಪ್ರಕರಣಗಳು ದಾಖಲಾಗದೆ ಜಾತಿವಾದಿ ಸಂಪ್ರದಾಯಸ್ಥರ ರಾಜಿ ಪಂಚಾಯಿತಿಯಲ್ಲೆ ಲಕ್ಷಾಂತರ ದಲಿತ ಬದುಕುಗಳು ಧ್ವಂಸಗೊಳ್ಳುತ್ತವೆ , ಇನ್ನೂ ಅದೆಷ್ಟು ಘಟನೆಗಳು ಮಾನ ಮರ್ಯಾದೆಗಂಜಿ ಹಾಗೆ ಮುಚ್ಚಿಟ್ಟುಕೊಂಡು ದುಃಖಿಸುತ್ತಾರೆ, ದಲಿತರ ಮೇಲಿನ ದೌರ್ಜನ್ಯ ತಡೆಕಾಯ್ದೆಯಡಿ ಪ್ರತಿವರ್ಷ ಸಾವಿರಾರು ಪ್ರಕರಣಗಳು ದಾಖಲಾಗುತ್ತವೆ ಆದರೆ ಅದರಲ್ಲಿ ಶೇಕಡ 5 ರಷ್ಟು ಪ್ರಕರಣಗಳಲ್ಲು ಶಿಕ್ಷೆ ಆಗುವುದಿಲ್ಲ, ಆ ನಿಟ್ಟಿನಲ್ಲಿ ತೀರ್ಪುಗಳನ್ನು ರಚನಾತ್ಮಕವಾಗಿ ನ್ಯಾಯಂಗದ ಘನತೆಗೆ ದಕ್ಕೆ ಆಗದಂತೆ ವಿಮರ್ಶೆ ಮಾಡಬೇಕಿದೆ, ಉತ್ತರ ಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳು ಇತ್ತೀಚಿಗೆ ದಲಿತ ದೌರ್ಜನ್ಯಗಳಲ್ಲಿ ಗಿನ್ನಿಸ್ ರೆಕಾರ್ಡ್ ಮುರಿಯುತ್ತಿವೆ,ಕೋಮು,ಹಾಗೂ ಮನುಸ್ಮೃತಿಯಂತೆ ಸರ್ಕಾರ ಮಾಡುವ ಯಥಾಸ್ಥಿತಿ ಮೂಲಭೂತವಾದಿಗಳು ಕೊನೆಯಾಗಬೇಕು ದಲಿತರ ಪರ್ಯಾಯ ಪರಿವರ್ತನಾ ರಾಜಕಾರಣ ಪ್ರಬುದ್ದವಾಗಬೇಕು,ಜಾತಿಯ ದರ್ಪ,ವ್ಯವಸ್ಥೆಯ ಕುಮ್ಮಕ್ಕಿನ ವಿರುದ್ದ ಯುವ ದಲಿತ ಹೋರಾಟಗಾರರು ಬಂಡಾಯ ಸಾರಬೇಕಿದೆ,
The country with dalit blood on its hands
Those days of Maratha rule when women from untouchable castes were sexually assaulted and murdered would repeat themselves in India and those days aren’t far.
– BR Ambedkar
The above lines highlight the realities of contemporary India, for the words of Babasaheb have come true.
Violence against dalit women and their exploitation have become normalised. This is a tragic development. Rape, assault, or even murder of dalits, as “punishment” for minor “mistakes” shows us how strongly the caste system continues to prevail around us. We must understand that the upper castes “punishing” dalits still originate from their wish to shame and threaten the latter.
Following is a (non comprehensive) list of incidents of atrocities that were recently committed against dalits:
- Kolar: In a land related dispute, brothers from a dalit community were murdered by the upper castes.
- Jamakhandi: A dalit girl was sexually assaulted and hacked to death by a boy from the Lingayat community.
- Chikkanguru in Channagiri taluk: A labourer was hacked to death for demanding wages.
- Barabanki in Uttar Pradesh: An 18-year old dalit girl was sexually assaulted and killed.
- Aligarh: A Dalit girl was sexually assaulted and killed in March 2021.
- Fatehpur: In Lalauli village, a 20-year-old dalit girl was assaulted by Avaas Yadav and Guddu Yadav.
- Kakure village in UP: A fourteen year old dalit girl was assaulted and killed.
- Balaramapura: In October 2020, a minor girl was raped and her body was thrown at her doorstep.
- Baavedi village in Madhya Pradesh: A Dalit girl was assaulted and killed. The perpetrators are roaming about with full impunity till date.
As a person who hears about these atrocities almost everyday, I feel the urge to write about them.
The system that has come to power with the agenda of Hindutva is reinstating the atrocities that were committed by the Peshwas many years ago. The atrocities on dalits today testify the extent to which India is driven by casteism and communalism.
Madhu Hulisara, a dalit student in Naragunda, Gadag district, Karnataka was walking to school carrying a bag full of dreams. She was kidnapped, sexually assaulted and made to suffer acid attacks by those belonging to upper caste groups. This is the kind of cruelty experienced by dalits, especially women, in the region. Despite complaints registered at the Naragunda police station, no action has been taken.
What happened to Madhu is not an isolated incident. Similar atrocities have been reported and police cases have been registered in Kaladagi, Baagalkote district, the same month.
A dalit girl, daughter of a devadasi, from Santhebennur, Davanagere district, was romantically involved with a married man from an upper caste community. In December, the mother of the girl learnt that she was pregnant. A police complaint filed by the girl’s mother resulted in an informal meeting of the caste heads in the village. In this meeting, it was concluded that since the girl belonged to a lower caste, she couldn’t be taken in by Prasanna’s family. He was directed to rent a house for her and was made to pay a fine of ten thousand rupees.
The girl can neither go to school nor marry him. She is now preparing to become a devadasi just like her mother.
This is but a mere a glimpse of the nature of the atrocities committed against dalit communities.
Kulenooru, Channagiri district witnessed an inhuman attack on a dalit labourer by a Krishnamurthy from an upper caste community. Krishnamurthy, who owns a television dish connection agency, had reportedly asked the labourer to clear his dues. The labourer asked for time and this enraged Krishnamurthy who, along with a few thugs, pulled the labourer out on to the streets, tied him up to a street light, and attempted to murder him. According to Nilappa, a dalit leader and an eye witness, the labourer would have died if the police had not arrived on time. However, the police has not taken any action, despite a case having been registered under the Atrocities Act. Working hand in glove with the casteist political environment of the land, the police has now closed the case. Krishnamurthy and others roam around untouched till date.
As seen in all the above cases, the police of the region have very openly taken the side of the perpetrator instead of supporting the victim. This can be seen in another incident of sexual assault of a dalit labourer in Siddhanmatha, Davangere district as well. The victim is married to a drunk, has two kids, and is the sole breadwinner of the family. With the help of a few learned dalit youth in the neighborhood, the survivor could get medical attention and also filed a complaint against the perpetrator. The police registered an irrelevant caseleaving out the angle of rape. The case was re-opened due to pressure from local dalit rights organisations and Nagraj was imprisoned. However, he is currently out of prison. Nagraj has now fully received an impunity and he has been roaming around the village. What has happened to the survivor not only saddens but also enrages me. The victim has been ostracised by her family and the neighbourhood. She even attempted suicide, unable to bare the humiliation she is subjected to everyday. Her husband and children don’t live with her anymore and she continues to suffer in seclusion.
There is no limit to the “reasons” cited by upper castes to attack and abuse dalits. In an incident in a village in Nalkudare, a fifty six years old widowed dalit woman was harassed by upper-caste families because of a piece of fertile land owned by the woman. The woman acquired this land from the government and worked hard on it to cultivate coconut and areca. However, this plot of land was surrounded by the lands of those belonging to the upper castes. When the woman objected to selling her land to these families, her crops were destroyed. Those responsible were arrested under the Atrocities Act, but were later acquitted. Though she received a small compensation from the government, she is left with a land with no crops today.
In the Basapura village of Chitradurga district, a clash between some dalit youth and the leaders of the Lingayat community was reported last month. In this incident, the dalit youth were beaten up for dancing alongside the lingayat youth in a religious procession in the village. Not surprisingly, the case was prematurely closed by the Holalkere Police. In Nulenuru, a neighboring village, a dalit man named Parameshi was beaten up black and blue just because she sat in front of a shop. Parameshi was bedridden and no case has been registered against the shop owner. In another gruesome incident, a dalit labourer family was forced to take the body of their infant out of the tomb in the Koratagere taluk of Tumakuru district. The family had already buried the body of their infant who reportedly died due to the shock caused by the gelatin blasts in the nearby quarry. This incident got attention as a video went viral and the person who forced the couple to take out the buried body of their child has been absconding.
Here are the statistics of the 2020 Dalit Atrocities of the Karnataka Police Department: 1, 219 in 2018. There were 899 cases registered in 2019, from August 31, 2018 and from 2018 to August 2020, there were 428 rape and 263 murders committed on SC / ST women in the state. Thousands of cases are registered each year under the Prevention of Atrocities on Dalits. In at least 5 percent of these cases, the perpetrators are not punished. Uttar Pradesh and Karnataka have recently broken the Guinness record for Dalit atrocities.
These are however the cases registered by the government. Thousands of dalits are attacked every day and instead of getting their cases registered, they are forced to reached a compromise by the local panchayats run by upper castes. Many such incidents aren’t reported because people are worried of the shame and grief reporting these incidents would cause.