ಗಾಯಗೊಳ್ಳದೆ ಇರುವ ಜಾಗ ಇನ್ನೂ ಸ್ವಲ್ಪ ಉಳಿದಿತ್ತು
ಇರಿದು ಹೋದವರ ಜಾಗವನ್ನೇ ಹೊಸ ಚೂರಿ ಬಯಸಿತು
दिल में बची थी जगह थोड़ी और नए ज़ख्मो के लिए
फिर भी हर एक खंजर पुराने ज़ख्मो पे उतरता रहा ॥
ನನ್ನ ಬದುಕಿಸುವುದು ರೊಟ್ಟಿಯೇ ಎನಿಸಿತ್ತು
ನಿನ್ನ ಸಂಧಿಸುವ ತನಕ
दो वक़्त कि रोटी मिल जाए तो ज़िंदा रह सकूंगा
अपनी मुलाक़ात से पहले यूं भी लगता था ॥
ಚರಿತ್ರೆಯ ಬೀದಿಯಲಿ ಅಪರಾಧ ಶಿಕ್ಷೆಯ ಹೆಜ್ಜೆ ಗುರುತು ಅಚ್ಚಳಿಯದೆ ಉಳಿದುಬಿಟ್ಟವು
ದೇಹ ದಂಡನೆಯಿಂದ ಆತ್ಮದ ತಪ್ಪು ಸರಿಪಡಿಸಲು ಬರುವುದೆಂದು ಹೇಳಿಕೊಟ್ಟವರು ಯಾರು ?
तारीख की गलियों में गुनाह-ओ-सज़ा के नक्श-ए-पा है हज़ार
सलीब उठाने से रूह इब्न-इ-मरियम की बनती नहीं ॥
ನಗರದ ಕೂಟಗಳಲ್ಲಿ ಹಾರಾಡುತ್ತಿವೆ ಬೀದಿಗೆ ಹಸ್ತಾನ್ತರಗೊಂಡ ಧರ್ಮದ ಧ್ವಜ
ಜಡಿಮಳೆ ವಾರವಿಡೀ ಸುರಿದರೂ ಹಾಗೆ ಇದೆ ಬೀದಿ ತುಂಬಿದ ಸಾವ ವಾಸನೆ
बज़्म-ए-याराँ में आज मौजूद है मज़हब के परचम
बरसात में मौत की बू बह नहीं गई ज़रा भी ॥
ಬೆಳಕಿದ್ದಾಗ ಈ ಲೋಕ ನನ್ನನಷ್ಟೇ ಅಲ್ಲ ನನ್ನ ನೆರಳನ್ನೂ ಗುರುತಿಸಿತು
ಕತ್ತಲಾಯಿತು ನೋಡಿ ನನ್ನ ನೆರಳನ್ನಲ್ಲ ನನ್ನನ್ನೂ ಗುರುತಿಸದೆ ನಡೆದುಹೋಯಿತು
हो रोशनी तो मेरे साए को भी पहचानती है दुनिया
छागया अँधेरा तो मैं कौन क्या है मेरा साया ॥
ನಿನ್ನೂರ ಬೆಲ್ಲವೇ ಸಿಹಿಯೆಂದು ನಾಡು ನೀಡಿದೆ ಸರ್ಟಿಫಿಕೇಟ್
ನಿನ್ನ ಗಲ್ಲದೆದುರು ಎಷ್ಟೊಂದು ಖೊಟ್ಟೆಯಾಗಿ ಕಂಡಿತು
कुछ फीका फीका लगता है तेरे होंठों के आगे मुझे
गुड तेरे शहर का जो मशहूर है दुनिया भर में ॥
ಈಗಲೂ ಅಷ್ಟೇ ಊರ ಜನ ಸತ್ತ ಸುದ್ದಿ ಬಂದರೆ
ಹಲಗೆ ಬಾರಿಸುವವನ ಗೂಡಿನಲಿ ಹೊಗೆ ಕಾಣುವದು
आज भी गर किसी घर में जनाज़ा उठता है
उस एक घर के चूल्हे से धुंआ उठता है ॥
ನಿನ್ನ ನಾಲಿಗೆಗೆ ರಕ್ತದ ರುಚಿ
ನನ್ನ ಗಾಯ ವಾಸಿಯಾಗುವುದು ಎಂತು ?
मेरे ज़ख्म सारे अब भरे भी तो कैसे
ज़ाइका जो लग गया है तुझे लहू का ॥
ಎಷ್ಟೆಲ್ಲಾ ಅವಸರಿಸಿದರೂ ಮನೆಗೆ ಮರಳುವಷ್ಟರಲ್ಲಿ ಕತ್ತಲಾಯಿತು
ದೀಪವಿಲ್ಲದ ಕೋಣೆಗೋಡೆಗಾನಿ ಮಗಳು ಒರಗಿದ್ದಾಳೆ ಮೌನವೇ ಮಲಗಿದ ಹಾಗೆ
तेज़ कदम मेरे पहुँच न सके घर शब् से पहले
अँधेरे में दीवार से लग कर बैठी थी बच्ची सन्नाटे की तरह ॥