Music has been like a “tonic” for the dalit and Left movements of Karnataka, performing the very important task of explaining their goals and values of these movements to those who cannot read and write.
Besides entertaining protesters, they also have the responsibility to introduce citizens to ongoing movements. The songs of the Left movement, mainly by the “Jana Kala Mandali” and of the dalit movement by the “Dalit Kala Mandali”, talk about the painful lives of ordinary people and the anti-people policies of various governments.
Earlier in Karnataka, songs originally written in Telugu by singers like Charabandaraju and Gaddar were translated into Kannada. Under the leadership of Gaddar, the “Jana Natya Mandali” gained popularity not only in (undivided) Andhra Pradesh, but also in the neighbouring states of Maharashtra, Karnataka and Tamil Nadu. Hundreds of singers were inspired by Gaddar’s style of music and singing, and some of them even dressed like Gaddar. Ambanna Arolikar is one such singer.
Ambanna, born in the Arori village in Karnataka’s Raichur district grew up amid poverty and oppression. Since 1985, Ambanna has been involved with the student, farmers’ and dalit movements. Even to this day, he writes, composes and sings songs of resistance in villages across Karnataka. His songs against child labour, female foeticide, demanding quality education, on landowners, dalit lives and the like are quite popular in the state. In this interview, Ambanna opened up about his participation in these movements.
Huchangi Prasad (HP): What inspired you to be part of the dalit-Ambedkarite movement?
Ambanna Arolikar (AA): I lived in a hostel during my seventh grade. The warden was a casteist person and I experienced this the most blatantly when it came to food.
During my tenth grade, the dalit movement took up the issue of “bettale seve” (nude service) — performed as a ritual offering to the Huligemma Devi. The Huligemma Devi of our village is very popular in Karnataka and parts of Andhra, Tamil Nadu and Kerala. The movement against this practice soon grew stronger and was successful forcing the government to ban it.
I used to observe all of these developments carefully. Back in the day, the Ambedkarite movement had dalit students alone. It used to take birth, grow and solidify wherever there was caste-based injustice and atrocities. The dalit movement has not ceased to exist and committed activists can be seen fighting constantly for dalit rights till date. This is why I was inspired to take part in them and the movement, in turn, became a source of inspiration for my music.
HP: Tell us about your music.
AA: Rural Karnataka used to be sites of extreme caste based violence and oppression, when I was growing up. I started off by singing about the pain of the oppressed as reflected in some ordinary incidents. My songs have been about us not being allowed to touch the common water source, us being served coffee in coconut shells by restaurants, being forbidden from entering the temples, the lives of devadasis, the overall helplessness of the oppressed and the like. Therefore, it is my own pain, difficulties and anger that have influenced my music. My songs were also against landowners and about the difficulties faced by women in my neighborhood.
It is my own pain, difficulties and anger that have influenced my music.
For instance, when the chieftain of the village calls for a newly married dalit man, he has to leave his new bride in bed and leave. I witnessed this in the lives of my sisters and wrote: “We are surrounded by the sounds of us getting kicked; there is no end to our pain; we would lose our heads if we don’t obey them. Our freedom is for namesake.”
I also sang folk songs that were sung by mothers while performing everyday chores and songs sung in the fields by poor farmers or agricultural labourers.
HP: How has Gaddar inspired you?
AA: I learnt about activism from the dalit and Left movements. If the dalit movement was like an anganwadi in terms of providing me the initial knowledge, the Left movement was like college.
I was arrested for two years — not for murdering or incitement of violence, but for singing songs against landowners.
By the time I was introduced to Gaddar, I had been writing and singing revolutionary songs for some years. My songs had unsettled the rich landowners and they had conspired against me with the then ruling government. I was arrested for two years — not for murdering or incitement of violence, but for singing songs against landowners. The government simply didn’t want the common people to be aware of the oppression against them.
Gaddar and I are like siblings and together, we have travelled a lot. I used to sing with him across South India and I was also arrested because of my relationship with him. In 2000, we had invited Gaddar to our village and had organised a large gathering. I learned many things from him — how to sing, what to sing about, how to ensure that my music influences people. I learnt it all directly from him. I owe my fearlessness, determination and ideological clarity to Gaddar, my mentor.
HP: How important is music to progressive movements?
AA: Music and activism are two sides of the same coin when it comes to progressive politics. Songs are the backbone of any movement, as they play a major role in encouraging and motivating its activists. In my experience, people have been drawn to many movements not only by long speeches but by songs too. My songs are inspired by everyday problems — caste discrimination, dowry, foeticide, malnutrition, hunger, atrocities, intolerance, corruption and the like. I stayed with the movement to ensure that these songs reached the masses.
Songs are the backbone of any movement, as they play a major role in encouraging and motivating its activists.
It was my participation in the dalit and Left movements that strengthened my music. As Charabandaraj, a prominent poet from Andhra says, “If a song is oxygen, a movement is a direction”.
I choose to sing wherever the constitution is overruled and where atrocities are reported. For example I sing, “The government in Delhi is in it’s full form, so is the apathy of starving people in my village. Oh! You thief who stole our votes just to be seated in power, come! Come and see our lives. Lives of us the poor.” I will keep singing to ensure the survival of the ideology I believe in. If music is my skin, the movements are the blood and muscles in my body — they inspire and help each other.
ಕರ್ನಾಟಕದ ದಲಿತ.ಎಡಪಂಥೀಯ.ಹಾಗೂ ಜನಪರ ಚಳುವಳಿ ಹೋರಟಗಳಿಗೆ ಹಾಡುಗಳು ಟಾನಿಕ್ ಇದ್ದಂತೆ.ಚಳುವಳಿಯ ನಿಶ್ಕಲ್ಮಶ ಮನಸ್ಸುಗಳಿಗೆ.ಒದು ಬರಹ ಗೊತ್ತಿಲ್ಲದವರಿಗೆ ಹಾಡುಗಳ ಮೂಲಕ ಹೋರಾಟದ ಆಶಯಗಳನ್ನು ತಿಳಿಸುವುದು ಸಾಮಾನ್ಯ ಜನರಿಗೆ ಹೋರಾಟದ ಕಾವನ್ನು ಮನ ಮಿಡಿಯುವ ರೀತಿಯಲ್ಲಿ ಮುಟ್ಟುವ ಮಹಾಸಾಧನವೆಂದರೆ ಹಾಡುಗಳು.
ಚಳುವಳಿ ಜನರ ಕೊಂಡಿಯಾಗಬೇಕಾದರೆ ಸಾಮಾನ್ಯ ಜನರನ್ನು ತಲುಪಬೇಕು ಎಂದರೆ ಹೋರಾಟದ ಹಾಡುಗಳಿಗಿರುವ ಮಹತ್ವ ಹೆಚ್ಚಾಗಿರಬೇಕು.ಸಾವಿರಾರು ಜನರು ಸೇರಿ ಅನ್ಯಾಯದ ವಿರುದ್ದ ಪ್ರತಿಭಟಿಸುತಿದ್ದ ಪ್ರತಿಭಟನಾಕಾರರನ್ನು ಕೇವಲ ರಂಜಿಸುವುದಕ್ಕೆ ಮಾತ್ರ ಹಾಡುಗಳು ಸೀಮಿತಗೊಳ್ಳುವುದಿಲ್ಲ.ಅವುಗಳು ಹೋರಾಟಕ್ಕೆ ಸ್ಪೂರ್ತಿ ತುಂಬುವ ಕ್ರಾಂತಿಕಾರಿ ಶಕ್ತಿಗಳಾಗಿವೆ.ಎಡಪಂಥೀಯ ಹಾಗೂ ದಲಿತ ಚಳುವಳಿಯನ್ನು ಉತ್ತುಂಗಕ್ಕೇರಿಸಿದ ಹಾಡುಗಳು ಇಂದಿಗೂ ಪ್ರಸ್ತುತವೆಂಬಂತೆ ಕಾಣುತ್ತವೆ.ಒಂದು ಹೋರಾಟದ ಯಶಸ್ವಿಗೆ ಹೋರಾಟದ ಹಾಡುಗಳ ಪಾತ್ರ ಅತ್ಯಂತ ಅಗತ್ಯವೆನಿಸುತ್ತವೆ.
ಎಡಪಂಥೀಯ ಚಿಂತನೆಗಳೊಂದಿಗೆ “ಜನ ಕಲಾ ಮಂಡಳಿಯ” ಹಾಡುಗಳು ಹಾಗೂ ದಲಿತ ಚಳುವಳಿಯ ಚಿಂತನೆಗಳೊಂದಿಗೆ “ದಲಿತ ಕಲಾ ಮಂಡಳಿಯ” ಹಾಡುಗಳು ಜನರ ನೋವುಗಳನ್ನು ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಹಾಡಿನ ಮೂಲಕ ಹೇಳುತಿದ್ದರು.
ಆರಂಭದಲ್ಲಿ ತೆಲುಗಿನ ಚರಬಂಡರಾಜು ಹಾಗೂ ಗದ್ದರ್ ಬರೆದ ಹಾಡಿದ ಹಾಡುಗಳನ್ನು ಕನ್ನಡಕ್ಕೆ ಅನುವಾದಿಸಿ ಹಾಡಲಾಗುತಿತ್ತು.
ಗದ್ದರ್ ನೇತೃತ್ವದ “ಜನ ನಾಟ್ಯ ಮಂಡಳಿ” ಆಂದ್ರದಲ್ಲಿ ಮಾತ್ರವಲ್ಲದೆ ಕರ್ನಾಟಕ. ತಮಿಳುನಾಡು. ಮಹಾರಾಷ್ಟ್ರ. ಮುಂತಾದ ರಾಜ್ಯಗಳಲ್ಲಿ ಪ್ರಸಿದ್ದಿಯನ್ನು ಗಳಿಸಿಕೊಂಡು ಗದ್ದರ್ ಶೈಲಿಯನ್ನು ಅನುಕರಿಸುವ ನೂರಾರು ಹಾಡುಗಾರರನ್ನು ಸೃಷ್ಟಿಸಿತು.ಗದ್ದರ್ ರೀತಿಯ ಉಡುಪು ಅದೆ ರೀತಿಯ ಭಾವಭಿನಯ ಭಂಗಿಗಳು. ತಮಟೆನಾದ.ಗುಂಪು ನರ್ತನಗಳ ಶೈಲಿ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾದವು.ಹೋರಾಟದ ಸಂದರ್ಭಕ್ಕೆ ತಕ್ಕಂತೆ ಹಾಡುಗಳನ್ನು ಬರೆದು ಹಾಡತೊಡಗಿದರು.ಜನಜೀವನಗಳನ್ನು ಅನುಭವದ ಮೂಲಕ ನೈಜ ವಾಸ್ತವ ಬದುಕಿನ ವಿವಿಧ ರೀತಿಯ ಮಜಲುಗಳನ್ನು ಹಾಡು ಕಟ್ಟಿ ಹಾಡಿದ ಕವಿಗಳು ಹಾಡುಗಾರರು ಹಲವಾರು ಜನರು ಕರ್ನಾಟಕದಲ್ಲಿ ಇದ್ದಾರೆ. ಅಂತಹವರಲ್ಲಿ ಅಂಬಣ್ಣ ಆರೋಲಿಕರ್ ಮುಂತಾದ ಹಾಡುಗಾರರನ್ನು ನೋಡಬಹುದು.
ಕ್ರಾಂತಿಕಾರಿ ಹಾಡುಗಳನ್ನು ಬರೆಯುವ ಹಾಗೂ ರಾಗ ಸಂಯೋಜನೆ ಮಾಡಿ ಹಾಡುತ್ತಾ ಹಳ್ಳಿಹಳ್ಳಿಗಳಲ್ಲಿ ಚಳುವಳಿಯನ್ನು ಗಟ್ಟಿಗೊಳಿಸುತ್ತಿರುವ ಅಂಬಣ್ಣ ಆರೋಲಿಕರ್ ರವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಆರೋಲಿಯಲ್ಲಿ ಜನಿಸಿ ಬಾಲ್ಯದಲ್ಲಿ ಬಡತನ.ಶೋಷಣೆ. ಹಾಗೂ ಅಸ್ಪೃಶ್ಯತೆಯನ್ನು ಮೈಗೂಡಿಸಿಕೊಂಡು ಬೆಳೆದ ಅಂಬಣ್ಣನವರು 1985 ರಿಂದ ವಿದ್ಯಾರ್ಥಿಗಳ.ರೈತಾಪಿ ಜನರ.ದಲಿತರ ಮೂಲಭೂತ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ನೂರಾರು ಹೋರಾಟಗಳನ್ನು ಹಮ್ಮಿಕೊಂಡು ಅನ್ಯಾಯದ ವಿರುದ್ಧ ಸಿಡಿಯುತಿದ್ದರು.ಅಂಬಣ್ಣಗೆ ದಲಿತ ಚಳವಳಿ ಅಂಗನವಾಡಿಯಾದರೆ ಎಡಪಂಥೀಯ ಚಳುವಳಿ ಪದವಿ ಶಿಕ್ಷಣ ಕಲಿಸುತ್ತದೆ.ಬಾಲಕಾರ್ಮಿಕರ ಬಗ್ಗೆ ಹೆಣ್ಣು ಮಕ್ಕಳ ಭ್ರೂಣ ಹತ್ಯೆಗಳ ಬಗ್ಗೆ. ಉತ್ತಮ ಶಿಕ್ಷಣದ ಗುಣಮಟ್ಟದ ಬಗ್ಗೆ.ಭೂ ಮಾಲಿಕರ ಬಗ್ಗೆ. ದಲಿತರ ನೋವುಗಳ ಬಗ್ಗೆ ಹೀಗೆ ಹಲವಾರು ಜಾಗೃತಿ ಗೀತೆಗಳನ್ನು ರಚಿಸಿ ಸ್ವತಃ ತಾನೆ ಹಾಡುವ ಮೂಲಕ ಕರ್ನಾಟಕದ ಮನೆಮನೆಯ ಮಾತಾಗಿದ್ದಾರೆ ಅಂಬಣ್ಣ ನವರು.ಇಂತಹ ಜನತಾ ಹಾಡುಗಾರ ಅಂಬಣ್ಣನವರನ್ನು ಸಂದರ್ಶಿಸಿದಾಗ ಅಂದಿನ ಹೋರಾಟದ ಅನೇಕ ನೆನಪುಗಳನ್ನು ಚಳವಳಿಯಲ್ಲಿ ಜನರಿಗಾಗಿ ಹಾಡಿ ಹೋರಾಟಗಾರರ ಎದೆಯೊಳಗೆ ಕಿಚ್ಚನ್ನು ಹಚ್ಚಿದ ಅನೇಕ ಅಂಶಗಳನ್ನು ಹಾಗೂ ತಮ್ಮ ಹಾಡುಗಳ ರಚನೆ ರಾಗ ಸಂಯೋಜನೆ.ಅವತ್ತಿನ ಹೋರಾಟಗಳ ಬಗ್ಗೆ ಒಡಲಾಳವನ್ನು ತಮ್ಮ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
1) ಕೇವಲ ಒಂದು ಚಳುವಳಿಗೆ ಸೀಮತವಾಗದೆ ಎಲ್ಲಾ ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದೀರಿ ಚಳುವಳಿಗೆ ಧುಮಕಲು ಕಾರಣ.
ಅಂ.:ಏಳನೆ ತರಗತಿ ಒದುವಾಗ ನಾನು ಹಾಸ್ಟೆಲ್ ನಲ್ಲಿದ್ದೆ ಊಟದ ವಿಚಾರದಲ್ಲಿ ಮೇಲ್ವಿಚಾರಕ ತಾರತಮ್ಯ ಜಾತಿಯತೆ ಮಾಡುತಿದ್ದರು.ನಂತರ ಹತ್ತನೆ ತರಗತಿ ಒದುತಿದ್ದಾಗ ದಲಿತ ಚಳುವಳಿ ಉತ್ಕೃಷ್ಟವಾಗಿತ್ತು.ನಮ್ಮೂರಿನಲ್ಲಿ ಹುಲಿಗೆಮ್ಮ ದೇವಿ ಜಾತ್ರೆ ರಾಜ್ಯದಲ್ಲೆ ಪ್ರಸಿದ್ದಿ ಪಡೆದಿದೆ.ಆಂದ್ರ.ತಮಿಳುನಾಡು. ಮಹಾರಾಷ್ಟ್ರ. ಕೇರಳ ಮುಂತಾದ ಹೊರರಾಜ್ಯಗಳಿಂದ ಹೆಚ್ಚು ಭಕ್ತರನ್ನು ಹೊಂದಿರುವ ದೇವರು.ಹುಲಿಗೆಮ್ಮನ ಜಾತ್ರೆ ಅಂದರೆ ಬಹಳ ದೊಡ್ಡ ಜಾತ್ರೆ ಅಲ್ಲಿ ಬೆತ್ತಲೆ ಸೇವೆ ಬಹು ಮುಖ್ಯವಾಗಿ ನಡೆಯುತಿತ್ತು.ಮೂಢನಂಬಿಕೆಗಳು.ಕಂದಾಚಾರಗಳು ಜಾತ್ರೆಯಲ್ಲಿ ಹೇರಳವಾಗಿ ನಡೆಯುತಿದ್ದವು.ಈ ಆಚರಣೆಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಉಗ್ರಹೋರಾಟ ಮಾಡಿ ಬೆತ್ತಲೆ ಸೇವೆಯನ್ನು ಸಂಪೂರ್ಣ ನಿಷೇಧಿಸಲಾಯಿತು. ಇದೆಲ್ಲಾ ನನ್ನ ಗಮನ ಸೆಳೆಯಿತು.ಅಂದು ಅಂಬೇಡ್ಕರ್ ಚಳುವಳಿ ಹೋರಾಟ ಅಂದರೆ ಅದು ದಲಿತ ವಿದ್ಯಾರ್ಥಿಗಳ ಹೋರಾಟವಾಗಿತ್ತು.ಎಲ್ಲಿ ದೌರ್ಜನ್ಯ ಆಗುತ್ತಿತ್ತೊ ಆ ಸ್ಥಳಕ್ಕೆ ಹೋಗಿ ಪ್ರತಿಭಟಿಸುತಿದ್ದ ನಿರಂತರ ಹೋರಾಟವೆ ದಲಿತ ಹೋರಾಟಗಾರರಲ್ಲಿತ್ತು .ಪೂರ್ಣಾವಧಿ ಕಾರ್ಯಕರ್ತರ ಪಡೆ ಎಲ್ಲಿರುತ್ತದೊ ಅಲ್ಲಿ ಚಳುವಳಿ ಗಟ್ಟಿಯಾಗಿರುತ್ತಿತ್ತು.ಆ ಮಟ್ಟಿಗೆ ದಲಿತ ಚಳುವಳಿ ನನ್ನ ಬರಹ ಮತ್ತು ಹಾಡಿಗೆ ಪ್ರೇರಣೆ ನೀಡುತ್ತದೆ.
2) ನಿಮ್ಮ ಹಾಡಿನ ಕಾವ್ಯದ ವಸ್ತು ಏನಾಗಿರುತ್ತಿತ್ತು.
ಅಂ:-ಹಳ್ಳಿಗಳು ದೌರ್ಜನ್ಯದ ಗೂಡುಗಳಾಗಿದ್ದವು.ಚಿಕ್ಕ ಚಿಕ್ಕ ಕಾರಣಗಳಿಗೆ ಬಹಿಷ್ಕಾರ .ದೈಹಿಕ ಹಿಂಸೆ ಜಾತಿಕಾರಣಕ್ಕೆ ಹೆಚ್ಚಾಗಿದ್ದವು.ಜನರ ನೋವುಗಳನ್ನೆ ಜನಸಾಮಾನ್ಯರ ಭಾಷೆಯಲ್ಲಿ ರಾಗಕಟ್ಟಿ ಹಾಡುತ್ತಿದ್ದೆ.ನೀರನ್ನು ಎತ್ತಿ ಸುರಿಯುತ್ತಿದ್ದು.ತೆಂಗಿನ ಚಿಪ್ಪಿನಲ್ಲಿ ಕಾಪಿ ಕೊಡುವ ಹೋಟೆಲ್ ಗಳು.ದೇವಸ್ಥಾನದ ಹೊರಗೆ ನಿಲ್ಲಿಸುತ್ತಿದ್ದು ಹಾಗೂ ಹೊಸದಾಗಿ ದಾಂಪತ್ಯ ಜೀವನವನ್ನು ನೆಮ್ಮದಿಯಿಂದ ಮಾಡಲಾರದ ಪರಿಸ್ಥಿತಿಗಳು. ದೇವದಾಸಿಯರ ಜೀವನಗಳು.ಅಸಹಾಯಕತೆ. ಅಮಾನವೀಯ ದರ್ಪಗಳು ಇಂತಹ ನಿಕೃಷ್ಟ ವಸ್ತುಗಳು ನನ್ನ ಬರಹವನ್ನು ಪ್ರೇಪಿಸಿ ಹಾಡುಗಳಾಗಿ ಹೊರಹೊಮ್ಮುತ್ತಿದ್ದವು.ನಾನು ಅನುಭವಿಸಿ ನೋವು. ಸಂಕಟ.ಆಕ್ರೋಶಗಳೇ ರಾಗಗಳಾಗಿ ಹೊರ ಬಂದವು.
ಹೊಸದಾಗಿ ಮದುವೆಯಾಗಿದ್ದ ದಲಿತ ಗಂಡಹೆಂಡತಿ ಮಲಗಿದ್ದಾಗ ಊರಗೌಡ ಒಂದು ಮಾತು ಕರೆದರೆ ಗಂಡ ತನ್ನ ಹೆಂಡತಿಯ ಮಗ್ಗಲನ್ನು ಬಿಟ್ಟು ಹೋಗಬೇಕಿತ್ತು.ಇದೆಂತಾ ಕ್ರೌರ್ಯ..? ಇದೆಂತಾ ಸ್ವತಂತ್ರ..? ನನ್ನ ಅಕ್ಕ.ತಂಗಿ ತಾಯಂದಿರು ನಿತ್ಯ ಅನುಭವಿಸುತ್ತಿರುವುದನ್ನು ಕಣ್ಣಾರೆ ನೋಡುತ್ತಿದ್ದೆ.ಅವಾಗ
“ಎಲ್ಲಿ ಕೇಳಿದರಲ್ಲಿ ಬೂಟುಗಾಲಿನ ಸದ್ದು
ತರತರದ ನೋವುಗಳು ನಮಗಾ
ಅವರಂಗೆ ಇರದಿದ್ರೆ ತಲೆ ಕಡಿದು ಹಾಕುವರು
ಹೇಸರಿಗೆ ಸ್ವಾತಂತ್ರ್ಯ ನಮಗಾ?
ಎಂಬ ಹಾಡು ಹೊರಬಂತು.ಭೂಮಾಲಿಕರ ವಿರುದ್ದದ ಹಾಡುಗಳು.ಹೇಳಿಕೊಳ್ಳಲಾರದ ನಮ್ಮ ಹಟ್ಟಿಯ ಹೆಂಗಸರ ವೇದನೆಗಳು .ಅನಕ್ಷರಸ್ಥ ನನ್ನ ತಾಯಂದಿರು ಹೇಳುತ್ತಿದ್ದ ಬೀಸುವ ಪದಗಳು.ಕುಟ್ಟುವ ಪದಗಳು ಜನಪದ ಹಾಡುಗಳು.ಹೊಲದಲ್ಲಿ ದುಡಿಯುವಾಗ ಹೇಳುತ್ತಿದ್ದ ಹಾಡುಗಳು.ಸೋಬಾನೆ ಪದಗಳೊಂದಿಗೆ ಜನರ ಮಧ್ಯ ಬೆರೆತು ಅವರದ್ದೆ ರಾಗ ಸಂಯೋಜನೆಯೊಂದಿಗೆ ಪ್ರತಿಯೊಬ್ಬರು ಒಡಲಾಳವನ್ನು ಹೇಳುತ್ತಿದ್ದೆ ಆಗಾಗಿ ನನ್ನ ಹಾಡುಗಳು ಜನರ ಬಳಿಗೆ ಹೋಗಿ ಹೆಚ್ಚು ಮಹತ್ವ ಪಡೆದವು.
ನಗೆ ಆರಂಭದಲ್ಲಿ ಚಳುವಳಿಯ ಧೀಕ್ಷೆ ಕೊಟ್ಟ ಅಂಗನವಾಡಿ ಅಂದರೆ ದಲಿತ ಚಳುವಳಿ. ನಾನು ಚಳುವಳಿಯಲ್ಲಿ ಡಿಗ್ರಿ ಮಾಡಿದ್ದು ಎಡಪಂಥೀಯ ಚಳುವಳಯಲ್ಲಿ.ಅವಾಗ ನನಗೆ ಗದ್ದರ್ ಪರಿಚಯ ಆಗುತ್ತದೆ. ಅಂದು ನಾನು ತುಂಬಾ ಕ್ರಾಂತಿಕಾರಿ ಹಾಡು ಬರೆದು ಹಾಡುತ್ತಿದ್ದೆ. ಭೂಮಾಲಿಕರ ನಿದ್ದೆಗೆಡಿಸುತ್ತಿದ್ದ ನನ್ನ ಹಾಡುಗಳನ್ನು ನಿಲ್ಲಿಸಲು ಅಂದಿನ ವ್ಯವಸ್ಥೆ ನನ್ನ ಎರಡು ವರ್ಷ ಜೈಲಿಗೆ ಕಳಿಸಿತು.ಹಾಡಿದ್ದ ಕಾರಣಕ್ಕೆ ಜೈಲಿಗೆ ಹೋದೆ.ನಾನು ಯಾವ ಕೊಲೆ ಮಾಡಲಿಲ್ಲ ಬಂದೂಕು ಹಿಡಿದು ಬೀಗೆ ಇಳಿಯಲಿಲ್ಲ ಬದಲಾಗಿ ಜನರ ಸಂಕಷ್ಟಗಳನ್ನು ಭೂಮಾಲಿಕರ ದೌರ್ಜನ್ಯಗಳ ವಿರುದ್ದ ಸಾವಿರಾರು ಜನರ ಮಧ್ಯ ಹಾಡುತ್ತಿದ್ದೆ.ಆಗ ನನ್ನ ಅರೆಸ್ಟ್ ಮಾಡಿದರು.ಜನರು ಜಾಗೃತಿ ಆಗಬಾರದು .ಜನರು ಅನ್ಯಾಯದ ವಿರುದ್ಧ ಮಾತನಾಡಬಾರದು ಸದಾ ಭೂಮಾಲಿಕರ ಗುಲಾಮರಾಗಿರಬೇಕು ನೀತಿ ಅಂದಿನ ಆಡಳಿತದ ಪಾಳೆಗಾರಿಕೆ ಮನಸ್ಥಿತಿ ಆಗಿತ್ತು.
3) ಗದ್ದರ್ ಕವಿಗೂ ನಿಮಗು ಹಾಡಿನಲ್ಲಿ ಯಾವ ಸಂಬಂಧ ಇತ್ತು.
ಅಂ-: ಗದ್ದರ್ ಗು ನನಗು ಅಣ್ಣತಮ್ಮರ ಸಂಬಂಧ ಇದೆ.ಅವತ್ತು ನಾನು ಅರೆಸ್ಟ್ ಆಗಲು ಗದ್ದರ್ ಜೊತೆಗಿದ್ದ ನಂಟೆ ಕಾರಣ .ಅಂದು ಗದ್ದರ್ ರವರನ್ನು 2000 ನೆ ಇಸವಿಯಲ್ಲಿ ನಮ್ಮೂರಿಗೆ ಕರೆದು ದೊಡ್ಡ ಮಟ್ಟದ ಸಭೆ ಮಾಡಿದ್ವಿ.ಅದು ಸಹ ನನ್ನ ಅರೆಸ್ಟಿಗೆ ಕಾರಣವಾಯ್ತು.ಗದ್ದರ್ ಜೊತೆಗೆ ನಾನು ಮನೆ ತೊರೆದು ಸುಮಾರು ವರ್ಷಗಳ ಕಾಲ ಹಾಡ್ತಾ ಬೇರೆಬೇರೆ ರಾಜ್ಯಕ್ಕೆ ಹೋಗುತ್ತಿದ್ದೆ.ಅವರ ಜೊತೆ ಹಾಡುತ್ತಾ ದಕ್ಷಿಣ ಭಾರತ ಸುತ್ತುತಿದ್ದೆ.ಎಲ್ಲಾ ಕಡೆ ನಾವು ಕಾರ್ಯಕ್ರಮಗಳನ್ನು ಕೊಡ್ತಾ ಇದ್ವಿ.ಅವರಿಂದ ಹಾಡನ್ನು ಯಾವ ರೀತಿ ಹಾಡಬೇಕು.ತಮಟೆಯನ್ನು ಯಾವ ರೀತಿ ಬಡಿಬೇಕು.ಯಾವ ರೀತಿ ಕುಣಿದು ಹಾಡಬೇಕು.ಯಾವ ವಿಷಯವನ್ನು ಕುರಿತು ಹಾಡು ರಚಿಸಬೇಕು.ಜನರ ಎದೆಯೊಳಗೆ ನಾಟುವ ಹಾಡಿನ ಶೈಲಿಗಳು ಹೀಗೆ ಎಲ್ಲಾ ರೀತಿಯ ತರಬೇತಿಗಳನ್ನು ಅವರಿಂದ ನೇರವಾಗಿ ತೆಗೆದುಕೊಂಡಿದ್ದೆ.ಆಗಾಗಿ ನನಗೆ ಆ ಧೈರ್ಯ. ಬದ್ದತೆ.ಸೈದ್ಧಾಂತಿಕ ಸ್ಪಷ್ಟತೆ.ಬೇರೋರಲು ಕಾರಣವಾಯ್ತು.ಮೊನ್ನೆ 2018 ನೆ ಇಸವಿಯಲ್ಲಿ ನನ್ನ “ತ್ಯಾಗಜೀವಿ” ಪುಸ್ತಕದ ಬಿಡುಗಡೆಗೆ ಬಂದಿದ್ದರು.ಇಂದಿಗೂ ಅವರ ನನ್ನ ನಡುವಿನ ಚಳುವಳಿ ಸಂಬಂಧ ಹಾಗೆ ಇದೆ.
4) ನಿಮ್ಮ ಹಾಡು ಮತ್ತು ಹೋರಾಟಗಳು ಹೇಗಿದ್ದವು.
ಅಂ-:ಹಾಡು ಮತ್ತು ಹೋರಾಟ ಒಂದೆ ನಾಣ್ಯದ ಎರಡು ಮುಖವಿದ್ದಂತೆ.ಚಳುವಳಿಯನ್ನು ಗಟ್ಟಿಗೊಳಿಸುವ ಬೆನ್ನೆಲುಬಾಗಿ ಹಾಡು ಇರುತ್ತದೆ.ಹೋರಾಟಗಾರರನ್ನು ಉರಿದುಂಬಿಸುವ ಹಾಡುಗಳು ಹೋರಾಟಕ್ಕೆ ಭದ್ರಬುನಾದಿ ಕಾಕುತ್ತಿದ್ದವು.ಗಂಟೆಗಟ್ಟಲೆ ಬಾಷಣ ಮಾಡುವುದಕ್ಕಿಂತ ಒಂದು ಹಾಡಿನಲ್ಲಿ ಜನರ ನೋವನ್ನು ಹೇಳಿದಾಗ ಜನ ಬೇಗ ಆಕರ್ಷಿತರಾಗುತ್ತಾರೆ.ಜನರ ಬದುಕಿನ ಹಾಡುಗಳು ಹೆಚ್ಚು ಮಹತ್ವ ಪಡೆಯುತ್ತವೆ.ಜನಪರ ಹೋರಾಟಗಳ ಯಶಸ್ವಿಯಲ್ಲಿ ಕ್ರಾಂತಿಕಾರಿ ಹಾಡುಗಳು ತುಂಬ ಪರಿಣಾಮ ಬೀರುತ್ತವೆ. ಜನರ ದೈನಂದಿ ಸಾಮಾಜಿಕ ಪಿಡುಗುಗಳ ಬಗ್ಗೆ ಹಾಡು ಬರೆದು ಹಾಡುತ್ತಿನಿ.ಜಾತಿ ದೌರ್ಜನ್ಯಗಳಲ್ಲದೆ.ವರದಕ್ಷಿಣೆ. ಭ್ರೂಣ ಹತ್ಯೆ. ಅಪೌಷ್ಟಿಕತೆ. ಹಸಿವು. ವಿಕೃತ ಸಾವುಗಳು.ಅಸಹಾಯಕತೆ ನೋವುಗಳು.ಭ್ರಷ್ಟಾಚಾರ. ಇಂತಹ ಹಾಡುಗಳು ನನ್ನಿಂದ ಬಂದಿದ್ದರಿಂದ ಚಳುವಳಿಗಳೊಂದಿಗೆ ಉಳಿದು ಈ ಹಾಡುಗಳು ಜನರ ನಡುವೆ ಬೆರೆತವು.ಆಗಾಗಿ ಹೋರಾಟದ ಹಾಡುಗಳಿಗೆ ತಾಕತ್ತು ಬಂದಿತು.ಆಂದ್ರದ ಪ್ರಸಿದ್ದ ಕವಿ “ಚರಬಂಡರಾಜ್” ಕವಿ “ಹಾಡು ಆಕ್ಸಿಜನ್ ಆದರೆ ಹೋರಾಟ ಡೈರಕ್ಷನ್ ” ಎಂದಿದ್ದಾರೆ.
ನಾನು ದಲಿತ ಚಳುವಳಿಯಲ್ಲಿ ಹಾಡಿದೆ.ಅನಂತರ ಎಡಪಂಥೀಯ ಚಳುವಳಿಯಲ್ಲಿ ಹಾಡಿದೆ.ಇಂದು ದೇಶದ ಸಂವಿಧಾನಕ್ಕೆ ದಕ್ಕೆ ಬಂದಾಗ.ಎಲ್ಲೆಡೆ ದೌರ್ಜನ್ಯಗಳು ಹೆಚ್ಚಾದಾಗ.ರಾಜಕಾರಣಿಗಳ ಸುಳ್ಳು ಭರವಸೆಗಳ ಬಗ್ಗೆ
“ಡೆಲ್ಲಿಯಲ್ಲಿ ಸರ್ಕಾರದ ಜೋರು
ನಮ್ಮ ಹಳ್ಳಿಯಲ್ಲಿ ಕೂಳಿಲ್ಲದ ಗೋಳು
ಓಟು ಕದ್ದು ಸೀಟಿಗೋದ ಚೋರ
ನಮ್ಮ ಬಡಬಗ್ಗರ ಬದುಕು ನೋಡು ಬಾರ”
ಇಂತಹ ಹಾಡು ಕಟ್ಟಿ ಹಾಡ್ತಿನಿ.ನನ್ನ ಆತ್ಮಸಂತೋಷಕ್ಕೆ ನಾನು ನಂಬಿದ ಸಿದ್ದಾಂತ ಬದುಕಲು ಹಾಡ್ತಾ ಇರ್ತಿನಿ.ಹಾಡು ನನ್ನ ಮೈಗಂಟಿದ ಚರ್ಮವಾದರೆ ಚಳುವಳಿ ಚರ್ಮದ ಒಳಗಿರುವ ರಕ್ತ ಮಾಂಸಖಂಡವಿದ್ದಂತೆ.