TRIGGER WARNING: CASTE VIOLENCE
ದಲಿತ ಯವಕನಿಗೆ ಮೂತ್ರ ಕುಡಿಸಿದ ಸಬ್ ಇನ್ಸ್ಪೆಕ್ಟರ್. ದೇಶವನ್ನೇ ಬೆಚ್ಚಿ ಬೀಳಿಸುವ ಅಮಾನವೀಯ ಕೃತ್ಯ.
ದೇಶ ಕೋವಿಡ್ ರೋಗದಲ್ಲಿ ಮುಳುಗಿರುವಾಗ ಕೋವಿಡ್ ನಡುವೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು. ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ಯುವಕನ ಬಾಯಿಗೆ ಮೂತ್ರ ಕುಡಿಸಿ ಕೊನೆಗೆ ನೆಲಕ್ಕೆ ಸುರಿದಿದ್ದ ಮೂತ್ರವನ್ನು ನಾಲಗೆಯಿಂದ ನೆಕ್ಕಿಸಿದ ಗೋಣಿಬೀಡಿದ ಪಿಎಸ್ಐ ಅರ್ಜುನ್ ಎಂಬಾತ ತನ್ನ ವಿಕೃತಿಯನ್ನು ಮರೆದ.
ದೌರ್ಜನ್ಯ ಆದ ಈತನ ಹೆಸರು ಪುನೀತ್ 22 ವರ್ಷದ ಸ್ತುರದ್ರೂಪಿ ಯುವಕ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದವನು. ಐಟಿಐ ಮಾಡಿಕೊಂಡು ಹೊರಗುತ್ತಿಗೆಯಲ್ಲಿ ಕಂಪ್ಯೂಟರ್ ಕೆಲಸ ಮಾಡಿಕೊಂಡಿರುತ್ತಾನೆ.
ಇದೇ ಗ್ರಾಮದ ಗಂಡ ಹೆಂಡತಿ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳವೊಂದು ನಡೆಯಿತು. ಆರು ತಿಂಗಳ ಹಿಂದೆ ಪುನೀತ್ ಕಾಣೆಯಾದ ಹೆಂಗಸಿನ ನಂಬರ್ ಗೆ ಕರೆ ಮಾಡಿರುತ್ತಾನೆ. ಈ ವಿಚಾರ ಅವರ ಮನೆಗೂ ಗೊತ್ತಾಗಿ ಕರೆಸಿ ಮದುವೆಯಾದ ಹೆಣ್ಣುಮಕ್ಕಳಿಗೆ ಕರೆ ಮಾಡಬಾರದೆಂದು ಬುದ್ದಿ ಹೇಳಿ ಕಳಿಸುತ್ತಾರೆ. ಇದೀಗ ಆ ಹೆಣ್ಣುಮಗಳು ಪಕ್ಕದ ಮನೆಯಾತನೊಂದಿಗೆ ಓಡಿ ಹೋಗಿದ್ದು ಇದರಲ್ಲಿ ಪುನೀತನ ಕೈವಾಡ ಇರಬಹುದೆಂಬ ಶಂಕೆಯಿಂದ ಕೆಲವರು ಆತನ ಮನೆ ಮುಂದೆ ಬಂದು ಜಗಳ ಮಾಡುತ್ತಾರೆ. ಈ ಬಗ್ಗೆ ಮಾಹಿತಿಯೇ ಇಲ್ಲದ ಪುನೀತ್ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಎಷ್ಟೇ ಹೇಳಿದರೂ ಜನರು ಒಪ್ಪದಿದ್ದಾಗ ಹೆದರಿದ ಆತ 112 ಪೊಲೀಸರಿಗೆ ಕರೆ ಮಾಡಿ ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತಾನೆ. ಇದಾದ ನಂತರ ವಿಚಾರಿಸಿದ ಪೊಲೀಸರು ರಕ್ಷಣೆ ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಈತನನ್ನು ಜೀಪಿಗೆ ಕೂರಿಸಿಕೊಳ್ಳುತ್ತಾರೆ.ಅಷ್ಟರಲ್ಲಿ ಪಿಎಸ್ಐ ಅರ್ಜುನ್ ಕೂಡ ಅಲ್ಲಿಗೆ ಬರುತ್ತಾರೆ.
ಈ ನಡುವೆ ಈತನ ಮೇಲೆ ಯಾರೂ ದೂರು ನೀಡದಿರುವುದರಿಂದ ಈತನ ಪಾತ್ರ ಏನೂ ಇಲ್ಲ ಎಂದು ಹೇಳುತ್ತಾರೆ.
ಆದರೆ ಅಲ್ಲಿನ ಕೆಲ ಪೊಲೀಸರು “ಸಾರ್ ಈತನದ್ದು ಕೈವಾಡ ಇದೆ . ಅವರು ಓಡಿ ಹೋಗಲು ಈತನೇ ಕಾರಣ ’’ ಎಂದು ಪಿಎಸ್ಐ ಗೆ ಕಿವಿ ಚುಚ್ಚುತ್ತಾರೆ. ಅವರ ಮಾತು ನಂಬಿದ ಪಿಎಸ್ ಐ ` ಗಾಡಿ ಹತ್ತು ಸೂಳೆ ಮಗನೇ’ ಎಂದು ಗಾಡಿ ಹತ್ತಿಸಿಕೊಂಡು ಹೊರಡುತ್ತಾರೆ. ಮಾರ್ಗ ಮದ್ಯೆ 112 ನಿಂದ ತಮ್ಮ ಜೀಪಿಗೆ ಆತನನ್ನು ತುಂಬಿಕೊಳ್ಳುತ್ತಾರೆ.
ಅಲ್ಲಿ ಏನೇನು ನಡೆಯಿತು ಎಂಬುದನ್ನು ಪುನೀತ್ ಬಾಯಿಯಿಂದ ಕೇಳೋಣ.
ಗೋಣಿ ಬೀಡಿನ ಠಾಣೆಯಲ್ಲಿ ನರಕ ದರ್ಶನ ತೋರಿಸಿದ ಅರ್ಜುನ್
`ನಾನು ಪೊಲೀಸ್ ವಾಹನದಿಂದ ಕೆಳಗಿಳಿದ ತಕ್ಷಣ ಠಾಣೆಯ ಮೇಲಿನ ಕೋಣೆಯೊಂದಕ್ಕೆ ಕರೆದುಕೊಂಡು ಹೋದರು ನನ್ನ ಮೇಲೆ ದೂರಿಲ್ಲ ಎಂದು ಬೇಡಿಕೊಂಡರೂ ಕೇಳಲಿಲ್ಲ. ಬಟ್ಟೆ ಬಿಚ್ಚು ಸೂಳೆ ಮಗನೇ ಎಂದು ಬೈದರು. ನನ್ನ ಕೈ ಕಾಲು ಕಂಬಕ್ಕೆ ಕಟ್ಟಿ ನೇತು ಹಾಕಿದರು. ಮಧ್ಯೆ ಕಬ್ಬಿಣದ ರಾಡು ಇಟ್ಟರು. ಮುಂಗಾಲಿಗೆ, ಅಂಗಾಲಿಗೆ ಹೊಡೆದರು. ಸುಮಾರು 2 ಗಂಟೆ ಹಿಂಸೆ ಕೊಟ್ಟರು. `ಸಾರ್ ನಾನೇನಾದ್ರೂ ಇದರಲ್ಲಿ ಇದ್ದೀನಿ ಎಂದರೆ ಸತ್ತು ಹೋಗುತ್ತೇನೆ ಅವರನ್ನು ಕರೆಸಿ ಒಂದು ಮಾತು ಕೇಳಿ ಎಂದು ಅತ್ತು ಬೇಡಿಕೊಂಡೆ….ಅವರ ಮನ ಕರಗಲಿಲ್ಲ. ಬದಲಾಗಿ `ನೀನೇ ಮಾಡಿರುವುದು ಎಂದು ಒಪ್ಪಿಕೋ’ ಎಂದು ಮತ್ತೆ ಹೊಡೆದರು ಕೊನೆಗೆ ಇವರ ಹೊಡೆತ, ಹಿಂಸೆ ಹೆಚ್ಚಾದಾಗ ಸಾಯಿಸುತ್ತಾರೆ ಎಂದು ಹೆದರಿ ಒಪ್ಪಿಕೊಂಡೆ . ಆಗ ಸ್ವಲ್ಪ ಹೊತ್ತು ಸುಮ್ಮನಾದರು. ಗಂಟಲು ಒಣಗಿ ಹೋಗಿತ್ತು ಉಸಿರಾಡಲು ಕಷ್ಟ ಆಗುತ್ತಿತ್ತು ಬಾಯಾರಿಕೆ ಆಗುತ್ತಿದೆ ನೀರು ಕೊಡಿ ಎಂದು ಬೇಡಿಕೊಂಡೆ. ಅಲ್ಲೇ ಇದ್ದ ಪೊಲೀಸನಿಂದ ಖಾಲಿ ಬಾಟಲ್ ನಲ್ಲಿ ಉಳಿದಿದ್ದ ಎರಡೇ ಹನಿ ಹಾಕಿದರು. `ಚೆನ್ನಾಗಿದ್ದೀಯಾ’ ಎಂದು ಅಣಕಿಸಿ ಕೇಳಿದರು .
ನಾನು ನೇತಾಡುತ್ತಲೇ ಇದ್ದೆ. ನೀನು ಅಪ್ಪನಿಗೆ ಹುಟ್ಟಿದ್ದೀಯಾ..? ಎಂದು ಕೇಳಿದರು. ಹೌದು ಎಂದೆ. ಇದಕ್ಕೆ ಗ್ಯಾರಂಟಿ ಏನು..? ಎಂದರು… ಯಾವ ಜಾತಿ..?ಎಂದರು ಎಸ್ಸಿ ಎಂದಿದ್ದಕ್ಕೆ ಮತ್ತೆ ಹೊಡೆದರು. ನಿಮ್ಮದು ಇದೇ ಕೆಲಸ ಸೋಳೆ ಮಕ್ಕಳ ಎಂದು ಪಾದಕ್ಕೆ ಹೊಡೆದರು. ಕೊನೆಗೆ ಬಾಯಿ ಸಂಪೂರ್ಣ ಒಣಗಿದ್ದರಿಂದ ತಡೆಯದೇ ನೀರು ಬೇಕೇ ಬೇಕು ಎಂದು ಎಂದೆ.
” ಚೇತನ ಎಂಬುವನಿಂದ ಉಚ್ಚೆ ಕುಡಿಸಿದ ಪಾಪಿ ಅರ್ಜುನ
`ಬಾಯಾರಿಕೆ ತಡೆಯದೆ ಸಾಯುವಂತಾಗುತ್ತಿತ್ತು. ನೀರು ಬೇಕೇ ಬೇಕೆಂದು ಅಂಗಲಾಚಿದೆ. ನನ್ನ ಇರಿಸಿಕೊಂಡಿದ್ದ ಕೋಣೆಯಲ್ಲಿ ಕಳ್ಳತನದ ಆರೋಪದಲ್ಲಿ ಚೇತನ್ ಎಂಬುವನನ್ನು ಕರೆದು ಕೂರಿಸಿಕೊಂಡಿದ್ದರು. ಆತನನ್ನು ಕರೆದ ಅರ್ಜುನ್ ` ಈತನಿಗೆ ನೀರು ಬೇಕೆಂತೆ ಉಚ್ಚೆ ಹೂಯ್ಯೋ ‘ ಎಂದರು ಆತ ಹಿಂಜರಿದ. ಆದರೆ ಆತನಿಗೆ ಭಯ ಹುಟ್ಟಿಸಿ ನಿನಗೂ ಇದೇ ರೀತಿ ಮಾಡುತ್ತೇನೆಂದು ಹೆದರಿಸಿದರು. ಆಗ ನನ್ನ ಬಳಿ ಬಂದ ಆತ ಜಿಪ್ಪು ಬಿಚ್ಚು ನನ್ನ ಬಾಯಿಗೆ ಮೂತ್ರ ಮಾಡಿದ. ನಾನು ತಲೆ ಎತ್ತಿ ಬೇಡ ಎಂದರೂ ಬಿಡದ ಪಿಎಸ್ಐ ಉಚ್ಚೆ ಹೂಯಿಸಿದರು. ನನಗೆ ಆಗಲೇ ಸಾವು ಬರಬಾರದೆ ಅನಿಸಿತು. ಹೊಡೆದ ಹೊಡೆತಕ್ಕೆ ಕೈಕಾಲುಗಳು ಸಂಪೂರ್ಣ ಬಿದ್ದು ಹೋಗಿದ್ದವು. ನಂತರ ಕೆಲವರು ಕೆಳಗೆ ಇಳಿಸಿದರು. ಆಗಲೂ ಬಿಡದ ಅರ್ಜುನ್ ಅಲ್ಲಿ ಬಿದ್ದಿದ್ದ ಮೂತ್ರವನ್ನು ನಾಲಿಗೆಯಿಂದ ನೆಕ್ಕಿಸಿದರು.
ನಾನು ಇಲ್ಲಿದ್ದೇನೆಂದು ಯಾರಿಗೂ ಗೊತ್ತಿರಲಿಲ್ಲ . 5.30 ಕ್ಕೆ ನನ್ನ ಮಾವ ಬಂದಿದ್ದರೂ ನನ್ನ ಭೇಟಿಯಾಗಲು ಬಿಟ್ಟಿರಲಿಲ್ಲ. ರಾತ್ರಿ 10 ಗಂಟೆಗೆ ಬರಲು ಹೇಳಿದ್ದರು. ಕೊನೆಗೆ 10.30 ಕ್ಕೆ ಮಾವ ಬಂದರು. ನನ್ನ ಸ್ಥಿತಿ ನೋಡಿ ಅತ್ತರು. ಅವರೊಂದಿಗೆ ಬೈಕಲ್ಲಿ ಬರುತ್ತಾ ನಡೆದಿದ್ದೆಲ್ಲವನ್ನೂ ಹೇಳಿದೆ. ಆದರೆ ಅಪ್ಪ ಅಮ್ಮನಿಗೆ ವಿಚಾರ ಹೇಳಿರಲಿಲ್ಲ.
ಮತ್ತೆ ಟಾರ್ಚರ್ ಶುರುವಾಯ್ತು
ಅದಾಗಿ ಮತ್ತೆ ಅರ್ಜುನ್ ಅವರೇ ಕರೆ ಮಾಡಿ ನೀನೇ ಅವರನ್ನು ಎಲ್ಲಿಗೆ ಕಳಿಸಿದ್ದೀಯಾ ಕರೆದುಕೊಂಡು ಬಾ ಎಂದು ಹೆದರಿಸಿದರು. ಆಗ ಭಯ ಇನ್ನೂ ಶುರುವಾಯ್ತು . ಸಾಯಬೇಕೆನಿಸಿತು. ಕೊನೆಗೆ ಮಾವನಿಗೆ ಹೇಳಿದೆ. ನಂತರ ಗೊತ್ತಿರುವ ಪತ್ರಕರ್ತರ ಮೂಲಕ ಎಸ್ಪಿ, ಐಡಿ, ಡಿಐಜಿ , ಎಸ್ಪಿ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದೆವು. ಮಾಧ್ಯಮಗಳಲ್ಲಿ ಸುದ್ದಿ ಬಂತು. ಘಟನೆ ಬಗ್ಗೆ ನಮ್ಮ ಎಂಎಲ್ ಎ ಎಂಪಿ ಕುಮಾರಸ್ವಾಮಿ, ಮೋಟಮ್ಮ ಮೊದಲಾದವರು ವಿಚಾರಿಸಿಕೊಂಡರು. ದಲಿತ ಸಂಘಟನೆಗಳೆಲ್ಲ ನಮ್ಮ ಪರ ಬಂದರು. ಈ ನಡುವೆ ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಸ್ಪಿಗೆ ವಹಿಸಲಾಗಿದ್ದು ಅವರು ಬಂದು ನನ್ನ ಹೇಳಿಕೆ ತೆಗೆದುಕೊಂಡಿದ್ದಾರೆ. ಮೂತ್ರ ಕುಡಿಸಿದ ಚೇತನ್ ನಾಪತ್ತೆಯಾಗಿದ್ದಾನೆ. ಆತನಿಗೆ ಹಣ ಮತ್ತು ಬೆದರಿಕೆ ಹಾಕಿ ಎಲ್ಲೋ ಬಚ್ಚಿಡಲಾಗಿದೆ. ಆತ ಯಾರ ಕೈಗೂ ಸಿಗುತ್ತಿಲ್ಲ. ಕೆಲವು ಪೊಲೀಸರು ಹಾಗೂ ಕೆಲ ಮುಖಂಡರು ನನ್ನ ಮನೆಗೆ ಬಂದಿದ್ದರು ಎರಡು ಲಕ್ಷ ಹಣ ಕೊಡುತ್ತೇವೆ , ಕೆಲಸ ಕೊಡಿಸುತ್ತೇವೆ ರಾಜಿ ಮಾಡಿಕೋ ಎಂದರು. ನಾನು ಒಪ್ಪಿಕೊಳ್ಳಲಿಲ್ಲ. ನನಗೆ ಅವನ ಮೇಲೆ ವಯಕ್ತಿಕ ದ್ವೇಷ ಇಲ್ಲ ನನಗೆ ಆದ ಅವಮಾನ ಯಾರಿಗೂ ಆಗಬಾರದು. ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಆದರೆ ಅವನ ಕೆಲವು ಚೇಲಾಗಳು ನನ್ನ ಬಳಿಗೆ ಬಂದು ಕೊಲ್ಲುವೆ ಆ ಕೇಸ್ ವಾಪಾಸ್ ತಗೊ ಎಂದು ಬೆದರಿಸುತ್ತಿದ್ದಾರೆ.ಆಗಾಗಿ ಆತನ ಅಮಾನತ್ತು ಬೇಗ ಆಗಬೇಕು ನನಗೆ ನ್ಯಾಯ ಬೇಕು ಇಷ್ಟೆ ನಾನು ಕೇಳಿಕೊಳ್ಲುವುದು ಎನ್ನುತ್ತಾನೆ ಪುನೀತ್ .
ಇಂತಹುದೊಂದು ಅಮಾನವೀಯ ಕೃತ್ಯ ನಡೆದರೂ ಅರ್ಜುನ್ ಎಂಬ ಪಿಎಸ್ಐ ಮೇಲೆ ದೂರು ದಾಖಲಾದರು ಇನ್ನು ಯಾವ ಶಿಕ್ಷೆಯೂ ಆಗಿಲ್ಲ. ಜನರ ಕೋಪ, ಆಕ್ರೋಶ ಶಮನಗೊಳಿಸಲು ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿರುವ ಇಲಾಖೆ ಮುಖ್ಯಸ್ಥರು ಕೇವಲ ಕಣ್ಣು ಒರೆಸುವ ಕೆಲಸ ಮಾಡಿದ್ದಾರೆ. ಮೂತ್ರ ಕುಡಿಸಿದಂತ ಅತ್ಯಂತ ಅಮಾನವೀಯ ಪ್ರಕರಣ ನಡೆದರೂ ಮಾನವ ಹಕ್ಕು ಆಯೋಗ ತುಟಿ ಬಿಚ್ಚಿಲ್ಲ…
ಇಡೀ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು ಕೋರೋನಕ್ಕಿಂತ ಅತ್ಯಂತ ದೊಡ್ಡ ರೋಗ ಜಾತಿ ವ್ಯವಸ್ಥೆ.
ಅರ್ಜುನ್ ಎಂಬ ವಿಕೃತ ಸಬ್ ಇನ್ಸ್ ಪೆಕ್ಟರ್ ತಲೆ ದಂಡವಾಗಲೇಬೇಕು . ಪುನೀತ್ ಎಂಬ ಯುವಕನ ಪರ ನಾಡಿನ ಜನತೆ ನಿಲ್ಲೋಣ.
ಅಂಬೇಡ್ಕರ್ ಹುಟ್ಟಿ ಸಮಾನತೆಯ ಹಕ್ಕುನ್ನು ಕೊಟ್ಟರು ಕಾತಿವಾದಿಗಳು ಎಲ್ಲಾ ಇಲಾಖೆಯಲ್ಲಿ ಸೇರಿಕೊಂಡು ದಲಿತರನ್ನು ಹಿಂಡಿಹಿಪ್ಪೆ ಮಾಡುತ್ತಿದ್ದಾರೆ.ಇದೊಂದ ದೇಶವೆ ನಾಚಿಸುವ ಕೃತ್ಯ.ಸರ್ಕಾರ ಕೂಡಲೆ ಅರ್ಜುನ್ ನನ್ನ ಅಮಾನತು ಮಾಡಿ ಪುನೀತ್ ಗೆ ನ್ಯಾಯ ದೊರಕಿಸಿಕೊಡಬೇಕು.ಇಂತಹ ಅಮಾನವೀಯ ಘಟನೆಗಳು ಇನ್ನೆಂದೂ ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.ನೊಂದ ಪುನೀತ್ ಗೆ ಸರ್ಕಾರ ಸೂಕ್ತ ರಕ್ಷಣೆ ಕೊಡಬೇಕು.
A dalit youth in Karnataka allegedly tortured & forced to drink urine by a sub-inspector
While the country continues its battle with the deadly coronavirus, an incident of atrocity against a dalit youth in the Chikmagalur district of Karnataka has shocked the entire state. Punith, a 22-year-old youth who was under custody of the Gonibeedu police in a local case was allegedly forced to drink the urine of another inmate. A police sub-inspector Arjun has been accused of carrying out this act.
Punith hails from the Kiragunda village of Mudigere taluk and worked at a computer shop in Horaguttige. Six months ago, Punith was accused of calling a married woman who had fled her husband’s home following a fight with him. The family had spoken to Punith and had warned him against calling her. The woman has now eloped with her neighbour’s son and the family is accusing Punith of helping the woman elope. He has denied all the allegations. When the woman’s family attacked his house and fought with him and his family, Punith turned to the police for protection.
On May 10, the police reportedly arrived at the site to provide protection to the family. Upon interrogating both the parties the police asked Punith to go with them. The accused PSI Arjun was also present at the site. Since no one in the village came forward to file a complaint against Punith, the PSI was ready to let go of him. However, according to eyewitnesses, the other police personnel at the site alleged that Punith had in fact played a role in the case, convincing the PSI to take him under custody.
At the Gonibeedu police station, Punith was brutally beaten up with rods and lathis by PSI Arjun and others. He was not only physically tortured for two long hours but also forced into accepting that he had played a role in helping the woman elope. Once he had accepted the accusations, the police momentarily stopped the physical torture. When Punith asked for water they gave him just a few drops of it and laughed at his plight.
The police then allegedly questioned him about his caste and upon finding out that he belonged to a scheduled caste, started beating him up again. According to Punith, when he told he was a SC the police said, “this is what you sons of bitches do,” and started beating him. The torture was unbearable and he “begged” for water, explained Punith. This was when the PSI made Chetan, an inmate, urinate in Punith’s mouth.
Punith was released at 10:30 PM that day. His uncle picked him up and he told him everything that happened in the police station. PSI Arjun didn’t stop there, he called Punith and threatened him to bring the woman and the man she eloped with to the police station. This left him so scared that he even contemplated suicide.
His family learnt about this and approached the SP, IG, DIG and the Human rights’ commission through a few journalists. This incident was finally reported in the local media. The MLA and MP approached the family. The dalit organisations stood by the family.
The Deputy Superintendent of Police has been asked to investigate the case. Chetan, the inmate is absconding. According to Punith, many police officers offered him money and a job and asked him to accept a settlement. He says, “I don’t have any personal animosity against Arjun. I don’t want anyone else to go through what I did. He has now been transferred to the SP office. A few of his subordinates continue to threaten men. I only want him to be ousted from his position. I don’t want anything else.”
Ambedkar and his values of equality are being forgotten. One sees every department in the government being occupied by castiests. Due to the worsening covid situation in the state of Karnataka, the protests against Arjun are restricted only to social media. The “I stand with Punith” campaign has intensified. We demand justice for Punith. We demand that the accused be punished. The government must ensure that such incidents do not repeat and it must provide protection to Punith and his family.
Prajavani, a Kannada daily reported today that Arjun has been suspended (sic). But we have to note that he remained untouched for more than two weeks proving that our system is heavily infected by caste hegemony.